HomeInternationalVideo | ಪ್ರತ್ಯೇಕತಾವಾದಿ ಧ್ವಜ ಬೀಸಿದ ಖಲಿಸ್ತಾನ್ ಬೆಂಬಲಿಗರ ವಿರುದ್ದ ರೇಗಾಡಿದ ನ್ಯೂಜಿಲೆಂಡ್ ಪ್ರಜೆ

Video | ಪ್ರತ್ಯೇಕತಾವಾದಿ ಧ್ವಜ ಬೀಸಿದ ಖಲಿಸ್ತಾನ್ ಬೆಂಬಲಿಗರ ವಿರುದ್ದ ರೇಗಾಡಿದ ನ್ಯೂಜಿಲೆಂಡ್ ಪ್ರಜೆ

ನ್ಯೂಜಿಲೆಂಡ್ ನ ವ್ಯಕ್ತಿಯೊಬ್ಬರು ಖಲಿಸ್ತಾನ್ ಬೆಂಬಲಿಗರಿಗೆ ‘ನಿಮ್ಮ ದೇಶಕ್ಕೆ ಹಿಂತಿರುಗಿ’ ಎಂದು ಹೇಳುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ನ್ಯೂಜಿಲೆಂಡ್ ನ ಆಕ್ಲೆಂಡ್ನಿಂದ ವರದಿಯಾಗಿರುವ ವೀಡಿಯೊದಲ್ಲಿ, ನ್ಯೂಜಿಲೆಂಡ್ ಬಣ್ಣಗಳಲ್ಲಿ ಬ್ಯಾಸ್ಕೆಟ್ಬಾಲ್ ಉಡುಪನ್ನು ಧರಿಸಿದ ಬಿಳಿಯ ವ್ಯಕ್ತಿಯೊಬ್ಬರು ಖಲಿಸ್ತಾನಿ ಬೆಂಬಲಿಗರ ಮೇಲೆ ಕೂಗಾಡುವುದನ್ನು ಮತ್ತು ‘ಅಸಹ್ಯಕರ ಹಳದಿ ಧ್ವಜವನ್ನು’ ಬೀಸುವುದನ್ನು ನಿಲ್ಲಿಸುವಂತೆ ಹೇಳುವುದನ್ನು ಕಾಣಬಹುದು.

ಆ ವ್ಯಕ್ತಿಯು ಮಾತನಾಡುತ್ತಾ ಖಲಿಸ್ತಾನಿಗಳನ್ನು ನಿಮ್ಮ ಸ್ವಂತ ದೇಶಕ್ಕೆ ‘ಹಿಂತಿರುಗಿ’ ಎಂದು ಹೇಳುತ್ತಿದ್ದಂತೆ, ಕೆಲವು ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯ ಹತ್ತಿರ ಹೋಗುವುದನ್ನು ಕಾಣಬಹುದು. ಆ ವ್ಯಕ್ತಿಯನ್ನು ಬಂಧಿಸಲಾಗಿದೆಯೇ ಅಥವಾ ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ತಕ್ಷಣಕ್ಕೆ ತಿಳಿದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular