ಡಿಂಪಲ್‌ ಕೈ ಹಿಡಿದು ಲಂಡನ್‌ ನಲ್ಲಿ ಸನ್ನಿ ಡಿಯೋಲ್‌ ಸುತ್ತಾಟ; ಹಳೆ ವಿಡಿಯೋ ಮತ್ತೆ ವೈರಲ್

ಸನ್ನಿ ಡಿಯೋಲ್ ಮತ್ತು ಡಿಂಪಲ್ ಕಪಾಡಿಯಾ 90 ರ ದಶಕದ ನೆಚ್ಚಿನ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದು. ವರದಿಗಳ ಪ್ರಕಾರ, ಇವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿದ್ದರೂ ಅದನ್ನು ಜೋಡಿ ಅಧಿಕೃತಗೊಳಿಸಿಲ್ಲ.

ಲಂಡನ್ ಬೀದಿಗಳಲ್ಲಿ ಪರಸ್ಪರ ಕೈ ಹಿಡಿದುಕೊಂಡು ಅಡ್ಡಾಡುತ್ತಿರುವ ಈ ಜೋಡಿಯ ಹಳೆಯ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವೀಡಿಯೊದಲ್ಲಿ, ಲಂಡನ್ ಬೀದಿಯಲ್ಲಿ ಡಿಂಪಲ್‌ ಕಪಾಡಿಯಾ ಸಿಗರೇಟ್ ಸೇದುತ್ತಿರುವಾಗ ಸನ್ನಿ ಡಿಯೋಲ್ ಅವರ ಕೈಯನ್ನು ಹಿಡಿದಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಮಾತನಾಡದೆ ಬೆಂಚಿನ ಮೇಲೆ ಒಟ್ಟಿಗೆ ಕುಳಿತಿದ್ದಾರೆ.

ಈ ಸುದ್ದಿ ಹಿಂದೆ ʼಮುಂಬೈ ಮಿರರ್‌ʼ ನಲ್ಲಿ ವರದಿಯಾಗಿತ್ತು, ಆ ಸಂದರ್ಭದಲ್ಲಿ ಸನ್ನಿ ಡಿಯೋಲ್, ಡಿಂಪಲ್‌ ಜೊತೆಗಿರುವ ಸಲುವಾಗಿಯೇ ಲಂಡನ್‌ಗೆ ಒಂದು ವಾರದ ಅವಧಿಯ ಪ್ರವಾಸವನ್ನು ಕೈಗೊಂಡಿದ್ದರು. ಆಗಸ್ಟ್ 9, 2017 ರಂದು ನಿಶಾ ಪಾಲ್ ಎಂಬ ಅಭಿಮಾನಿ ಈ ವೀಡಿಯೊವನ್ನು ಸೆರೆಹಿಡಿದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read