HomeKarnatakaALERT : ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಮನೆ, ಕಟ್ಟಡ ಖರೀದಿಸುವ ಮುನ್ನ ಎಚ್ಚರ..! ಮಿಸ್ ಮಾಡದೇ...

ALERT : ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಮನೆ, ಕಟ್ಟಡ ಖರೀದಿಸುವ ಮುನ್ನ ಎಚ್ಚರ..! ಮಿಸ್ ಮಾಡದೇ ಈ ಸುದ್ದಿ ಓದಿ

ಬೆಂಗಳೂರು: ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ಕುಸಿದು 8 ಮಂದಿ ಮೃತಪಟ್ಟಿರುವ ಘಟನೆ ನಿಮಗೆ ಗೊತ್ತಿದೆ. ಬಲವಾದ ಪಿಲ್ಲರ್ ಹಾಕದೇ ಅವೈಜ್ಞಾನಿಕವಾಗಿ ಕಟ್ಟಡವನ್ನು ನಿರ್ಮಿಸಿದ ಹಿನ್ನೆಲೆ ಕಟ್ಟಡ ಆಟಿಕೆಯಂತೆ ಕುಸಿದು ಬಿದ್ದಿದೆ.

ಈ ಹಿನ್ನೆಲೆ ಅಲರ್ಟ್ ಆದ ಬಿಬಿಎಂಪಿ ಬೆಂಗಳೂರಿನಲ್ಲಿ ಬಿರುಕು ಬಿಟ್ಟ ಹಾಗೂ ಅವೈಜ್ಞಾನಿಕವಾಗಿ ನಿರ್ಮಿಸಿದ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದೆ.

ಕಡಿಮೆ ಖರ್ಚಿನಲ್ಲಿ ಮನೆ /ಕಟ್ಟಡ ನಿರ್ಮಿಸಿ ಮಾರಾಟ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನಲ್ಲಿ ನೀವು ಮನೆ, ಕಟ್ಟಡ ಖರೀದಿಸುವ ಮುನ್ನ ಎಚ್ಚರವಾಗಿರಬೇಕು. ಮಾಲೀಕರು ಕಡಿಮೆ ಖರ್ಚಿನಲ್ಲಿ ಕಳಪೆ ಕಾಮಗಾರಿ ಮಾಡಿ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಕಳಪೆ ಪಿಲ್ಲರ್ ಗಳನ್ನು ನಿರ್ಮಿಸಿ, ಕಳಪೆ ವಸ್ತುಗಳನ್ನು ಬಳಸಿ 3-4 ಅಂತಸ್ತಿನ ಕಟ್ಟಡ ನಿರ್ಮಿಸಿ ನಂತರ ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇಂತಹ ಕಟ್ಟಡ 2-3 ವರ್ಷದಲ್ಲಿ ಕುಸಿದು ಬೀಳುವ ಸಾಧ್ಯತೆಗಳಿದೆ.

ಹೆಣ್ಣೂರು ಬೆನ್ನಲ್ಲೇ ನಗರದ ಹೊರಮಾವು ನಂಜಪ್ಪ ಗಾರ್ಡನ್ ನಲ್ಲಿರುವ ಕಟ್ಟಡವೊಂದು ವಾಲಿದೆ. ನಿರ್ಮಾಣದ ಹಂತದ 6 ಅಂತಸ್ತಿನ ಕಟ್ಟಡ ಬಲಭಾಗಕ್ಕೆ ವಾಲಿದ್ದು, ಈ ಹಿನ್ನೆಲೆ ಕಟ್ಟಡ ತೆರವಿಗೆ ಬಿಬಿಎಂಪಿ ಸೂಚನೆ ನೀಡಿದೆ.ಆದ್ದರಿಂದ ಕಡಿಮೆ ಬೆಲೆಗೆ ಮನೆ/ಕಟ್ಟಡ ಸಿಕ್ಕಿತು ಎಂದು ಖರೀದಿಸುವ ಮುನ್ನ ನೀವು ಎಚ್ಚರ ವಹಿಸಬೇಕು. ಕಟ್ಟಡ ಖರೀದಿಸುವ ಮುನ್ನ ಕಟ್ಟಡದ ನಕ್ಷೆ, ಕಟ್ಟಡದ ದಾಖಲೆಗಳನ್ನು ಪರಿಶೀಲಿಸಿ.

ಅನಧಿಕೃತ ಕಟ್ಟಡದ ವಿರುದ್ಧ ಸರ್ಕಾರದ ಬ್ರಹ್ಮಾಸ್ತ್ರ

ಅನಧಿಕೃತ ಕಟ್ಟಡ, ಲೇಔಟ್ ವಿರುದ್ಧ ಸರ್ಕಾರ ಬ್ರಹ್ಮಾಸ್ತ್ರ ಹೂಡಿದ್ದು, ಕಟ್ಟಡ ಮಾಲೀಕರಿಗೆ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.ಬೆಂಗಳೂರು ನಗರದಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಕಟ್ಟಡಗಳು ಹಾಗೂ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲು ವಲಯ ಆಯುಕ್ತರಿಗೆ ಜವಾಬ್ದಾರಿ ನೀಡಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ಮಂಜೂರಾಗುವ ಕಟ್ಟಡ ನಕ್ಷೆಗಳನ್ನು ಆನ್ಲೈನ್ನಲ್ಲಿ ಪ್ರಕಟಿಸಲಾಗುತ್ತದೆ. ಈ ನಕ್ಷೆ ಮಂಜೂರಾದ 30 ದಿನಗಳೊಳಗೆ ಕಟ್ಟಡ ಮಾಲೀಕರು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ʼಬಿಲ್ಡಿಂಗ್ ಪ್ಲಿಂಥ್ ಲೈನ್ʼ ಅನ್ನು ನಗರ ಯೋಜನೆ ಅಧಿಕಾರಿಗಳು ಗುರುತು ಮಾಡಿಕೊಡಬೇಕು. ಅದನ್ನು ಕೇಂದ್ರ ಹಾಗೂ ವಲಯ ಕಚೇರಿಯ ಜಂಟಿ ನಿರ್ದೇಶಕರು ದೃಢೀಕರಿಸಬೇಕು ಎಂದಿದ್ದಾರೆ.ವಾರ್ಡ್ನಲ್ಲಿ ಕಿರಿಯ, ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್ಗಳು ಮಂಜೂರಾದ ನಕ್ಷೆಯ ವಿವರ ಪಡೆದುಕೊಂಡು ಅದರ ಅನುಸಾರ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿರುವುದನ್ನು ಕಾಲಕಾಲಕ್ಕೆ ಖಾತ್ರಿಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular