HomeIndiaVideo: ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು; ಪವಾಡಸದೃಶ್ಯ ರೀತಿಯಲ್ಲಿ ಮಗು ಪಾರು

Video: ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು; ಪವಾಡಸದೃಶ್ಯ ರೀತಿಯಲ್ಲಿ ಮಗು ಪಾರು

ತೆಲಂಗಾಣದ ವಾರಂಗಲ್‌ನಲ್ಲಿ ಬತುಕಮ್ಮ ಹಬ್ಬದ ಆಚರಣೆಯ ವೇಳೆ ಹಬ್ಬದ ಅಲಂಕಾರದ ಅಂಗವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿ ಕದಂ ಯಾಕಯ್ಯ (45) ಎಂಬ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ವೇಳೆ ಕದಂ ಯಾಕಯ್ಯ ಮಗುವನ್ನು ಹಿಡಿದುಕೊಂಡಿದ್ದು, ಪವಾಡಸದೃಶವಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಕಾರಿನ ಡ್ಯಾಶ್ ಕ್ಯಾಮ್‌ನಲ್ಲಿ ಸೆರೆಯಾದ ಈ ಅಪಘಾತದ ದೃಶ್ಯವು ಕದಂ, ಉತ್ಸವದ ದೀಪಗಳ ಅಡಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ.

ಈ ವೇಳೆ ಕೆಳಗೆ ಬಿದ್ದಿದ್ದ ವಿದ್ಯುತ್‌ ತಂತಿಯೊಂದಿಗೆ ಆಕಸ್ಮಿಕವಾಗಿ ಸಂಪರ್ಕಕ್ಕೆ ಬಂದಿದ್ದು, ಇದು ಅವರ ಸಾವಿಗೆ ಕಾರಣವಾಯಿತು. ಇವರ ಜೊತೆಗಿದ್ದ ಇಬ್ಬರು ವ್ಯಕ್ತಿಗಳು ಮಗುವನ್ನು ರಕ್ಷಿಸಲು ಯಶಸ್ವಿಯಾದರೂ ಕದಂ ಸ್ಥಳದಲ್ಲೇ ಸಾವನ್ನಪ್ಪಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

Tragic Incident in Warangal (Disturbing Video)

For Latest News Updates, Join Our Whatsapp Community🚩
RELATED ARTICLES

Most Popular