ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ.
ಸದ್ಗುರು ಪಾದದ ಫೋಟೋವನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಡಲಾಗಿದ್ದು, ಇದರ ಬೆಲೆ 3,200 ರೂ.ಗೆ ಎಂದು ಫಿಕ್ಸ್ ಮಾಡಲಾಗಿದೆ.
ಸದ್ಗುರು ಪಾದಗಳ ಫೋಟೋ ಫ್ರೇಮ್ ಗೆ 3,200 ರೂ.ಗಳ ಬೆಲೆ ಯಾಕೆ..? ಎಂದು ನೆಟ್ಟಿಗರು ಅಚ್ಚರಿ ಪಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ವ್ಯಾಪಕ ಟೀಕೆಗೆ ಕಾರಣವಾಗಿದೆ. ಈಶಾ ಫೌಂಡೇಶನ್ ವೆಬ್ಸೈಟ್ನಲ್ಲಿ ಸದ್ಗುರುಗಳ ಪಾದಗಳ ಫೋಟೋ ಮಾರಾಟ ಮಾಡಲಾಗುತ್ತಿದೆ.