HomeKarnatakaಮುನಿರತ್ನ ಆಡಿಯೋ ಪ್ರಕರಣ: ಪರೋಕ್ಷವಾಗಿ ನಕಲಿ ಆಡಿಯೋ ಎಂದ ಶಾಸಕ ಯತ್ನಾಳ್

ಮುನಿರತ್ನ ಆಡಿಯೋ ಪ್ರಕರಣ: ಪರೋಕ್ಷವಾಗಿ ನಕಲಿ ಆಡಿಯೋ ಎಂದ ಶಾಸಕ ಯತ್ನಾಳ್

ವಿಜಯಪುರ: ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಕಲಿ ಆಡೀಯೋಗಳನ್ನು ಸೃಷ್ಟಿಸುತ್ತಾರೆ ಎಂದಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಮುನಿರತ್ನ ಆಡಿಯೋ ಏನಿದೆ ನನಗೆ ಗೊತ್ತಿಲ್ಲ. ನಕಲಿ ಆಡಿಯೋಗಳನ್ನು ಸೃಷ್ಟಿಸುತ್ತಾರೆ. ಹಾಸ್ಯ ಕಲಾವಿದನೊಬ್ಬನಿದ್ದಾನೆ. ಎಷ್ಟು ಚೆಂದ ಮಿಮಿಕ್ರಿ ಮಾಡ್ತಾರೆ….ಎಂದಿದ್ದಾರೆ. ಈ ಮೂಲಕ ಮುನಿರತ್ನ ಆಡಿಯೋ ಡ್ಯೂಪ್ಲಿಕೇಟ್ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಕಾಂಗ್ರೆಸ್ ನಾಯಕರಿಗೆ ಹಿಂದೂಗಳು ಬೇಕಾಗಿಲ್ಲ, ಮುಸ್ಲಿಂರು ಬೇಕಾಗಿದ್ದಾರೆ. ಯಾದಗಿರಿಯಲ್ಲಿ ಪಿಎಸ್ ಐ ಆತ್ಮಹತ್ಯೆಯಾಯ್ತು. ದಲಿತ ಸಂಘಟನೆಗಳು ಎಲ್ಲಿದ್ದಾವೆ? ಕೆಲ ಮುಖಂಡರು ಪೇಯ್ಡ್ ಸರ್ವೆಂಟ್ ಇದ್ದಾರೆ. ಪೇಟಿಎಂ ಇದ್ದಂತೆ ಹಣ ಹಾಕಿದ ಕೂಡಲೇ ಕೆಲ ಸಂಘಟನೆಗಳು ಮಾತನಾಡುತ್ತವೆ. ಹಣ ಕಡಿಮೆಯಾಯ್ತು ಎಂದರೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತವೆ. ರಾತ್ರಿ ಪೇಮೆಂಟ್ ಆಯ್ತು ಎಂದರೆ ಹೋರಾಟ ಹಿಂಪಡೆಯಲಾಯ್ತು ಅಂತಾರೆ ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular