alex Certify ರಾಜ್ಯಕ್ಕೆ ಭರ್ಜರಿ ಸುದ್ದಿ: ಐಫೋನ್ ತಯಾರಿಕೆ ದೈತ್ಯ ‘ಫಾಕ್ಸ್ ಕಾನ್’ನಿಂದ 1200 ಕೋಟಿ ರೂ. ಹೂಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಕ್ಕೆ ಭರ್ಜರಿ ಸುದ್ದಿ: ಐಫೋನ್ ತಯಾರಿಕೆ ದೈತ್ಯ ‘ಫಾಕ್ಸ್ ಕಾನ್’ನಿಂದ 1200 ಕೋಟಿ ರೂ. ಹೂಡಿಕೆ

ನವದೆಹಲಿ: ಐಫೋನ್ ತಯಾರಿಕೆಯಲ್ಲಿ ದೈತ್ಯ ಕಂಪನಿ ಆಗಿರುವ ಚೀನಾದ ಫಾಕ್ಸ್ ಕಾನ್ ಕಂಪನಿಯು ಕರ್ನಾಟಕದ ತನ್ನ ಫಾಕ್ಸ್ ಕಾನ್ ಹಾನ್ ಹೈಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಸುಮಾರು 1,200 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.

ಫಾಕ್ಸ್ ಕಾನ್ ಕಂಪನಿಯ ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ. ಆ. 21ರಂದು ಫಾಕ್ಸ್ ಕಾನ್ ಹಾನ್ ಹೈಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ನ 120 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ 10 ರೂಪಾಯಿ ಮುಖಬೆಲೆಯಲ್ಲಿ ಫಾಕ್ಸ್ ಕಾನ್ ಖರೀದಿಸಿದೆ.

ದೊಡ್ಡಬಳ್ಳಾಪುರ ಸಮೀಪ ಬೃಹತ್ ಐಫೋನ್ ತಯಾರಿಕಾ ಘಟಕ ಸ್ಥಾಪಿಸಲು 25,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಫಾಕ್ಸ್ ಕಾನ್ ಯೋಜಿಸಿದೆ. ಈ ಘಟಕದಿಂದ 40,000 ಉದ್ಯೋಗಗಳ ಸೃಷ್ಟಿಯಾಗುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ನಾವು ಸ್ಥಾಪಿಸಲು ಉದ್ದೇಶಿಸಿರುವ ಘಟಕ ಎರಡನೇ ದೊಡ್ಡ ಫಾಕ್ಸ್ ಕಾನ್ ಪ್ಲಾಂಟ್ ಆಗಿದೆ. ಚೀನಾದಲ್ಲಿ ಸ್ಥಾಪಿಸಿರುವ ಘಟಕ ಮೊದಲ ಸ್ಥಾನದಲ್ಲಿದೆ ಎಂದು ಫಾಕ್ಸ್ ಕಾನ್ ಅಧ್ಯಕ್ಷ ಯಂಗ್ ಲಿಯು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...