ಕೇರಳ : ವಯನಾಡು ಭೂಕುಸಿತದಲ್ಲಿ ಇದುವರೆಗೆ 330 ಮಂದಿ ಬಲಿಯಾಗಿದ್ದು, ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಲೇ ಇದೆ.
ಚೂರಲ್ಮಾಲಾ ಮತ್ತು ಮುಂಡಕ್ಕೈನಲ್ಲಿ ಭೂಕುಸಿತ ಸಂಭವಿಸಿದ್ದು, ಕೇರಳದಲ್ಲಿ ಶೋಕಾಚರಣೆ ಮಾಡಲಾಗಿದ್ದು, ಸಾವಿನ ಸಂಖ್ಯೆ ಈಗ 330 ದಾಟಿದೆ. 220 ಕ್ಕೂ ಹೆಚ್ಚು ಜನರು ಕಾಣೆಯಾಗಿರುವುದರಿಂದ ಈ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಸಂಜೆ 4 ಗಂಟೆಯವರೆಗೆ ಮುಂದುವರಿಯಬೇಕಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಗುರುವಾರ ಮೊಟಕುಗೊಳಿಸಲಾಯಿತು.
ಕೇರಳದಲ್ಲಿ ಭೂಕುಸಿತ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಜಿಲ್ಲಾಡಳಿತ ಮಾಹಿತಿ ನೀಡಿತ್ತು, ಈ ಹಿನ್ನೆಲೆ ಅವರು ನಿನ್ನೆ ಕೇರಳದ ವಯನಾಡಿಗೆ ಧಾವಿಸಿ ಅಲ್ಲಿನ ಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರು ಅಲ್ಲಿನ ಜನರಿಗೆ 100 ಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದ್ದಾರೆ.
#WATCH | Wayanad landslide | Brigadier Arjun Segan, Commandant of the Para Regimental Training Centre says, " Today is the 4th day of this rescue operation…last evening by around 6 pm, we completed the bridge and were able to move vehicular movement upslope. This area where we… https://t.co/SBfthDKT5P pic.twitter.com/qa6rAEmthU
— ANI (@ANI) August 2, 2024
#WATCH | Kerala: Latest visuals of the Dog squad conducting search and rescue operations in Wayanad's Chooralmala.
A landslide that occurred here on 30th July, claimed the lives of 308 people. pic.twitter.com/jWvqQDHWQh
— ANI (@ANI) August 2, 2024

