HomeKarnatakaSHOCKING : ಬೆಂಗಳೂರಿನಲ್ಲಿ 'ಸರ್ಕಾರಿ ಆಸ್ಪತ್ರೆ' ಕಟ್ಟಡದಿಂದ ಜಿಗಿದು ರೋಗಿ ಆತ್ಮಹತ್ಯೆ

SHOCKING : ಬೆಂಗಳೂರಿನಲ್ಲಿ ‘ಸರ್ಕಾರಿ ಆಸ್ಪತ್ರೆ’ ಕಟ್ಟಡದಿಂದ ಜಿಗಿದು ರೋಗಿ ಆತ್ಮಹತ್ಯೆ

ಬೆಂಗಳೂರು: ಸರ್ಕಾರಿ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ರೋಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ನಡೆದಿದೆ.

ಮುನಿಯಲ್ಲಪ್ಪ (45) ಆತ್ಮಹತ್ಯೆಗೆ ಶರಣಾಗಿರುವ ರೋಗಿ. ಅನಾರೋಗ್ಯ ಹಿನ್ನೆಲೆಯಲ್ಲಿ ಜುಲೈ 16ರಂದು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮುನಿಯಲ್ಲಪ್ಪ, ಒಂದೇ ದಿನದಲ್ಲಿ ಡಿಸ್ಚಾರ್ಜ್ ಆಗಿದ್ದ. ನಿನ್ನೆ ಮತ್ತೆ ಆರೋಗ್ಯ ಸಮಸ್ಯೆ ಎಂದು ಆಸ್ಪತ್ರೆಗೆ ಬಂದಿದ್ದ. ಇಂದು ಆಸ್ಪತ್ರೆಯ 2ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮುನಿಯಲ್ಲಪ್ಪ ಶವ ಆಸ್ಪತ್ರೆಯ ಸಜ್ಜಾ ಮೇಲೆ ಪತ್ತೆಯಾಗಿದೆ. ಅಸ್ತಮಾ, ಹೋಟ್ಟೆನೋವು, ಜ್ವರ ಎಂದು ದಾಖಲಾಗಿದ್ದ ವ್ಯಕ್ತಿ ಈಗ ಏಕಾಏಕಿ ಅತ್ಮಹತ್ಯೆಗೆ ಶರಣಾಗಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular