HomeKarnatakaಪ್ರವಾಸಿಗರಿಗೆ ಗುಡ್ ನ್ಯೂಸ್ ; ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಹೆಚ್ಚುವರಿ 3 ಹೊಸ ವೋಲ್ವೋ ಬಸ್...

ಪ್ರವಾಸಿಗರಿಗೆ ಗುಡ್ ನ್ಯೂಸ್ ; ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಹೆಚ್ಚುವರಿ 3 ಹೊಸ ವೋಲ್ವೋ ಬಸ್ ಖರೀದಿ

ಬೆಂಗಳೂರು : ಪ್ರವಾಸೋದ್ಯಮ ಇಲಾಖೆಯು ರಾಜ್ಯ ಹಾಗೂ ಅಂತಾರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಪ್ರವಾಸಗಳನ್ನು ಆಯೋಜಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಹೆಚ್ಚುವರಿಯಾಗಿ 3 ಹೊಸ ವೋಲ್ವೋ ಬಸ್ಗಳನ್ನು ಖರೀದಿಸಿದೆ.

ತಿರುಪತಿ ಪ್ರವಾಸಕ್ಕೆ 55 ಆಸನಗಳ ಮಲ್ಟಿ ಆಕ್ಸೆಲ್ ಬಸ್, ಶಿರಡಿ ಪ್ರವಾಸಕ್ಕೆ 47 ಆಸನಗಳ ವೋಲ್ವೋ ಬಸ್ ಮತ್ತು ಪಾಂಡಿಚೇರಿ ಪ್ರವಾಸಕ್ಕೆ 47 ಆಸನಗಳ ವೋಲ್ವೋ ಬಸ್ಗಳನ್ನು ಖರೀದಿಸಲಾಗಿದೆ.

ಈ ಪ್ರವಾಸಕ್ಕೆ ತೆರಳಲು ಇಚ್ಛಿಸುವವರು ಯಶವಂತಪುರ ಕೇಂದ್ರ ಕಚೇರಿಯ ಬುಕ್ಕಿಂಗ್ ಕೌಂಟರ್, ಮೈಸೂರು ಸಾರಿಗೆ ವಿಭಾಗದ ಬುಕ್ಕಿಂಗ್ ಕೌಂಟರ್, ಕೆಂಪೇಗೌಡ ಬುಕ್ಕಿಂಗ್ ಕೌಂಟರ್, ರೆಡ್ಬಸ್ ಪೋರ್ಟಲ್, ಕೆಎಸ್ಆರ್ಟಿಸಿ ಅವತಾರ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್ಗಳ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು. https://www.kstdc.co/ ನಲ್ಲಿ ಆನ್ಲೈನ್ ಬುಕ್ಕಿಂಗ್ಗೂ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 080-43344334/35, 8970650070 ಅಥವಾ 8970650075 ಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular