alex Certify ಜುಲೈ 10 ಕ್ಕೆ ಬಿಡುಗಡೆಯಾಗಲಿದೆ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಮತ್ತೊಂದು ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ 10 ಕ್ಕೆ ಬಿಡುಗಡೆಯಾಗಲಿದೆ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಮತ್ತೊಂದು ಟ್ರೈಲರ್

ಅರುಣ್ ಅಮುಕ್ತ ನಿರ್ದೇಶನದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡಿದ್ದು, ಇದರ ಮತ್ತೊಂದು ಟ್ರೈಲರ್ ಜುಲೈ 10 ಕ್ಕೆ ಬರಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ಜುಲೈ 19ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ  ಬರಲಿದ್ದು,  ಜುಲೈ 14ಕ್ಕೆ ದುಬೈನಲ್ಲಿ ಪ್ರೀಮಿಯರ್ ಶೋ ನಡೆಯಲಿದೆ.

ಈ ಚಿತ್ರದಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ,ಅಮರ್, ಭಾವನಾ, ಮನಸ್ವಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್‌ ಹಾಗೂ ಅರವಿಂದ ರಾವ್, ಬಣ್ಣ ಹಚ್ಚಿದ್ದು, ವೆರೈಟಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಸುಬ್ರಹ್ಮಣ್ಯ ಕುಕ್ಕೆ ಹಾಗೂ ಶಿವಲಿಂಗೇಗೌಡ ನಿರ್ಮಾಣ ಮಾಡಿದ್ದಾರೆ. ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ನೀಡಿದ್ದು, ಪವನ್ ಗೌಡ ಸಂಕಲನ,  ಟೈಗರ್ ಶಿವು ಹಾಗೂ ನರಸಿಂಹ ಅವರ  ಸಾಹಸ ನಿರ್ದೇಶನವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...