HomeIPL 2026BREAKING: 2028ರಿಂದ ಬದಲಾಗಲಿದೆ ಐಪಿಎಲ್; ಲೀಗ್‌ ಹಂತದಲ್ಲಿ 70 ಪಂದ್ಯಗಳು ಇರಲ್ಲ ಎಂದ ಐಪಿಎಲ್ ಅಧ್ಯಕ್ಷ

BREAKING: 2028ರಿಂದ ಬದಲಾಗಲಿದೆ ಐಪಿಎಲ್; ಲೀಗ್‌ ಹಂತದಲ್ಲಿ 70 ಪಂದ್ಯಗಳು ಇರಲ್ಲ ಎಂದ ಐಪಿಎಲ್ ಅಧ್ಯಕ್ಷ

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತಿ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್. ಕೇವಲ ಭಾರತದ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ವಿದೇಶದ ಹಲವಾರು ದೇಶಗಳಲ್ಲಿ ಐಪಿಎಲ್ ಅನುಯಾಯಿಗಳಿದ್ದಾರೆ.

ಇನ್ನು ಐಪಿಎಲ್ ಎಂದರೆ ಕೇವಲ ಕ್ರಿಕೆಟ್ ವೀಕ್ಷಕರಿಗೆ ಮಾತ್ರವಲ್ಲದೇ ವಿದೇಶಿ ಆಟಗಾರರಿಗೂ ಸಹ ಅಚ್ಚುಮೆಚ್ಚು. ಐಷಾರಾಮಿ ಲೀಗ್, ಹಣದ ಹೊಳೆ ಹಾಗೂ ಭದ್ರತೆಯ ವಿಷಯಗಳಿಂದ ವಿದೇಶಿ ಆಟಗಾರರನ್ನು ವಶಪಡಿಸಿಕೊಂಡಿರುವ ಐಪಿಎಲ್ ವರ್ಷದಿಂದ ವರ್ಷಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಜತೆ ಜತೆಗೆ ಐಪಿಎಲ್ ನಿಯಮಗಳಲ್ಲೂ ಸಹ ಟೂರ್ನಿಯನ್ನು ಇನ್ನಷ್ಟು ಕುತೂಹಲಕಾರಿಯಾಗಿಸಲು ಬದಲಿಸುತ್ತಾ ಬರಲಾಗಿದೆ.

ಇದೀಗ ಮತ್ತೊಂದು ಮಹಾ ಬದಲಾವಣೆಗೆ ಮುಂದಾಗಿದ್ದು, ಲೀಗ್ ಪಂದ್ಯಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಸದ್ಯ ಲೀಗ್ ಹಂತದಲ್ಲಿ 70 ಪಂದ್ಯಗಳು ಹಾಗೂ ಪ್ಲೇಆಫ್ ಸುತ್ತಿನಲ್ಲಿ 4 ಪಂದ್ಯಗಳು ಸೇರಿ 74 ಪಂದ್ಯಗಳು ನಡೆಯುತ್ತಿದ್ದು, 2028ರಿಂದ ಲೀಗ್ ಹಂತದಲ್ಲಿ 90 ಪಂದ್ಯಗಳು ಹಾಗೂ ಪ್ಲೇಆಫ್ ಸುತ್ತಿನಲ್ಲಿ 4 ಪಂದ್ಯಗಳು ಸೇರಿ 94 ಪಂದ್ಯಗಳು ನಡೆಯಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಮಾತನಾಡಿದ್ದು, 2028ರಿಂದ ಐಪಿಎಲ್ ಪಂದ್ಯಗಳ ಸಂಖ್ಯೆಯನ್ನು 74ರಿಂದ 94ಕ್ಕೆ ಏರಿಸುವ ಯೋಜನೆ ಇದೆ ಎಂದಿದ್ದಾರೆ. ಲೀಗ್ ಹಂತದಲ್ಲಿ ಎಲ್ಲ ತಂಡಗಳು ಉಳಿದ ತಂಡಗಳ ಜತೆ ತಲಾ ಎರಡು ಪಂದ್ಯಗಳನ್ನು ಆಡಲಿವೆ. ಒಂದು ಪಂದ್ಯ ಹೋಮ್‌ ಗ್ರೌಂಡ್‌ನಲ್ಲಿ ಹಾಗೂ ಉಳಿದ ಪಂದ್ಯ ಎದುರಾಳಿ ಹೋಮ್ ಗ್ರೌಂಡ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. 2027ರಿಂದಲೇ ಈ ಬದಲಾವಣೆಯನ್ನು ತರಬೇಕಿತ್ತು. ಆದರೆ ಇತರೆ ಸರಣಿಗಳು ಈಗಾಗಲೇ ನಿರ್ಧಾರವಾಗಿರುವ ಕಾರಣ ಸಮಯದ ಸಮಸ್ಯೆ ಉಂಟಾಗಲಿದ್ದು, ಈ ಕಾರಣಕ್ಕೆ 2028ರಿಂದ ಈ ಬದಲಾವಣೆ ಜಾರಿಗೆ ಬರಲಿದೆ ಎಂದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular