ನವದೆಹಲಿ: ದೇಶದ ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ವಿಶ್ರಾಂತ ವೇತನದಾರರು (Pensioners) ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುವ 8ನೇ ವೇತನ ಆಯೋಗದ (8th Pay Commission) ಪ್ರಕ್ರಿಯೆಗಳು ಈಗ ಅತ್ಯಂತ ಪ್ರಮುಖ ಹಾಗೂ ನಿರ್ಣಾಯಕ ಹಂತಕ್ಕೆ ಬಂದು ತಲುಪಿವೆ ಕೇಂದ್ರ ಸರ್ಕಾರವು ಕಳೆದ 2025 ರ ನವೆಂಬರ್ 3 ರಂದು ಅಧಿಕೃತವಾಗಿ ಈ ಆಯೋಗವನ್ನು ರಚನೆ ಮಾಡಿತ್ತು. ಆಯೋಗಕ್ಕೆ ಕಂಪ್ಲೀಟ್ ವರದಿ ರೆಡಿ ಮಾಡಿ ಸರ್ಕಾರಕ್ಕೆ ಸಲ್ಲಿಸಲು ಒಟ್ಟು 18 ತಿಂಗಳ ಗಡುವು ನೀಡಲಾಗಿದ್ದು, ಈಗಾಗಲೇ 7 ತಿಂಗಳಿಗೂ ಅಧಿಕ ಸಮಯ ಉರುಳಿ ಹೋಗಿದೆ. ಸದ್ಯ ಆಯೋಗವು ದೇಶಾದ್ಯಂತ ನೌಕರರ ಒಕ್ಕೂಟಗಳ ಜೊತೆ ನಿರಂತರವಾಗಿ ಹೈ-ವೋಲ್ಟೇಜ್ ಸಭೆಗಳನ್ನು ನಡೆಸುತ್ತಿದ್ದು, ಒಳಗಿನಿಂದ ಹೊರಬಿದ್ದಿರೋ ಅಪ್ಡೇಟ್ಸ್ ಇಲ್ಲಿದೆ ಸಂಬಳದಲ್ಲಿ ಮೆಗಾ ಜಂಪ್‌ಗೆ ಕೌಂಟ್‌ಡೌನ್? 8ನೇ ವೇತನ ಆಯೋಗದಿಂದ ನೌಕರರ ವೇತನ 3 ಪಟ್ಟು ಹೆಚ್ಚಾಗುತ್ತಾ?
50 ಲಕ್ಷ ನೌಕರರು, 65 ಲಕ್ಷ ಪೆನ್ಷನರ್ಸ್ ಭವಿಷ್ಯ ನಿರ್ಧಾರ
ಈ ಆಯೋಗದ ಶಿಫಾರಸುಗಳು ದೇಶದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಅಧಿಕ ಪೆನ್ಷನರ್‌ಗಳ ಜೇಬಿಗೆ ನೇರ ಕನೆಕ್ಷನ್ ಹೊಂದಿವೆ. ಮುಂದಿನ ಇಡೀ ಒಂದು ದಶಕದ ಕಾಲ ಇವರ ಬೇಸಿಕ್ ಪೇ (Basic Pay), ಭತ್ಯೆಗಳು ಮತ್ತು ಫಿಟ್‌ಮೆಂಟ್ ಫ್ಯಾಕ್ಟರ್ (Fitment Factor) ಹೇಗೆ ಇರಬೇಕು ಅನ್ನೋದು ಇದೇ ವರದಿಯ ಮೇಲೆ ನಿರ್ಧಾರ ಆಗಲಿದೆ.
ಫಿಟ್‌ಮೆಂಟ್ ಫ್ಯಾಕ್ಟರ್‌ಗೆ ಬೇಡಿಕೆ ಸಂಬಳ ಎಷ್ಟು ಹೆಚ್ಚಾಗುತ್ತೆ?
ನೌಕರರ ಸಂಘಟನೆಗಳು ಈ ಬಾರಿ ಸರ್ಕಾರದ ಮುಂದೆ ಇಟ್ಟಿರೋ ಅತಿ ಮುಖ್ಯ ಬೇಡಿಕೆ ಅಂದ್ರೆ ಫಿಟ್‌ಮೆಂಟ್ ಫ್ಯಾಕ್ಟರ್ ಭಾರಿ ಏರಿಕೆ ಮಾಡುವುದು.
ಹಳೆ ಲೆಕ್ಕಾಚಾರ: 7ನೇ ವೇತನ ಆಯೋಗದಲ್ಲಿ 2.57 ಫಿಟ್‌ಮೆಂಟ್ ಫ್ಯಾಕ್ಟರ್ ಜಾರಿ ಮಾಡಿದ್ದರಿಂದ ನೌಕರರ ಕನಿಷ್ಠ ವೇತನ 7,000 ರೂ.ನಿಂದ 18,000 ರೂಪಾಯಿಗೆ ಏರಿಕೆಯಾಗಿತ್ತು.
ಹೊಸ ಡಿಮ್ಯಾಂಡ್: ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಏರುತ್ತಿರುವ ಹಣದುಬ್ಬರ, ಗಗನಕ್ಕೇರುತ್ತಿರುವ ಮನೆ ಬಾಡಿಗೆ, ಮಕ್ಕಳ ದುಬಾರಿ ಶಿಕ್ಷಣ ವೆಚ್ಚ ಹಾಗೂ ವೈದ್ಯಕೀಯ ವೆಚ್ಚಗಳನ್ನು ಮುಂದಿಟ್ಟುಕೊಂಡು, ನೌಕರರು ಕನಿಷ್ಠ 3.0 ರಿಂದ 3.68 ರವರೆಗೆ ಮತ್ತು ಕೆಲವು ಸಂಘಟನೆಗಳು 4.0 ರಷ್ಟು ಫಿಟ್‌ಮೆಂಟ್ ಫ್ಯಾಕ್ಟರ್ ಜಾರಿಗೆ ತರಲೇಬೇಕು ಎಂದು ಒತ್ತಾಯ ಹೇರುತ್ತಿವೆ
ಮೂಲ ವೇತನದ ಜಂಪ್: ತಜ್ಞರ ಅಂದಾಜಿನ ಪ್ರಕಾರ ಈ ಬೇಡಿಕೆ ಈಡೇರಿದರೆ, ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವು ಇನ್ಮುಂದೆ 54,000 ರೂ.ನಿಂದ ಬರೋಬ್ಬರಿ 72,000 ರೂಪಾಯಿಗಳ ಮಿತಿಗೆ ಜಂಪ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ
ಪೆನ್ಷನರ್‌ಗಳಿಗೂ ಸಿಗಲಿದೆಯೇ ಬಂಪರ್ ಲಾಟರಿ?
ಕೇವಲ ನೌಕರರಷ್ಟೇ ಅಲ್ಲ, ಲಕ್ಷಾಂತರ ವಿಶ್ರಾಂತ ವೇತನದಾರರಿಗೂ ಈ ಬಾರಿ ದೊಡ್ಡ ಆರ್ಥಿಕ ಲಾಭ ಸಿಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಹೊಸ ಫಿಟ್‌ಮೆಂಟ್ ಫ್ಯಾಕ್ಟರ್ ಬಂದರೆ ಪೆನ್ಷನ್ ಮೊತ್ತದಲ್ಲೂ ಭಾರಿ ಏರಿಕೆಯಾಗಲಿದೆ. ಇದರ ಜೊತೆಗೆ ಕುಟುಂಬ ಪೆನ್ಷನ್ (Family Pension), ಕನಿಷ್ಠ ಪೆನ್ಷನ್ ಲಿಮಿಟ್ ಹಾಗೂ ನಿವೃತ್ತಿ ನಂತರ ಸಿಗುವ ಗ್ರಾಚ್ಯುಟಿ ಮತ್ತು ಇತರೆ ಭತ್ಯೆಗಳ ಸೌಲಭ್ಯಗಳೂ ಕಡ್ಡಾಯವಾಗಿ ಪರಿಷ್ಕರಣೆಗೊಳ್ಳಲಿವೆ.
18 ರಿಂದ 24 ತಿಂಗಳ ಬಾಕಿ ಹಣ (Arrears) ಒಟ್ಟಿಗೆ ಸಿಗುತ್ತಾ?
ಮಾರುಕಟ್ಟೆ ತಜ್ಞರ ಪ್ರಕಾರ ಈ ವೇತನ ಆಯೋಗದ ಶಿಫಾರಸುಗಳು ಅಧಿಕೃತವಾಗಿ ಅನುಷ್ಠಾನಕ್ಕೆ ಬರಲು 2027 ರ ವರ್ಷದ ಆರಂಭದವರೆಗೆ ಸಮಯ ಹಿಡಿಯಬಹುದು. ಆದರೆ, ಟ್ವಿಸ್ಟ್ ಅಂದ್ರೆ, ಒಂದು ವೇಳೆ ಈ ಶಿಫಾರಸುಗಳನ್ನು 2026 ರ ಜನವರಿ 1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದರೆ, ನೌಕರರು ಮತ್ತು ಪೆನ್ಷನರ್‌ಗಳಿಗೆ ಬರೋಬ್ಬರಿ 18 ರಿಂದ 24 ತಿಂಗಳವರೆಗಿನ ಭಾರಿ ಮೊತ್ತದ ಅರಿಯರ್ಸ್ (ಬಾಕಿ ಹಣ) ಒಟ್ಟಿಗೆ ಕೈ ಸೇರಲಿದೆ ಇದು ಅವರವರ ಹುದ್ದೆಯ ಆಧಾರದ ಮೇಲೆ ಲಕ್ಷಾಂತರ ರೂಪಾಯಿ ಆಗಲಿದ್ದು, ನೌಕರರ ಅಕೌಂಟ್‌ಗಳು ಫುಲ್ ಭರ್ತಿಯಾಗಲಿವೆ.
8ನೇ ವೇತನ ಆಯೋಗದ ಅಧಿಕೃತ ವೆಬ್‌ಸೈಟ್‌ನ ಲೇಟೆಸ್ಟ್ ಅಪ್‌ಡೇಟ್ ಪ್ರಕಾರ, ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಸಭೆಗಳನ್ನು ನಡೆಸುವ ಮೂಲಕ ಅಭಿಪ್ರಾಯ ಸಂಗ್ರಹದ ಪ್ರಕ್ರಿಯೆಯನ್ನು ಆಯೋಗ ವೇಗಗೊಳಿಸಿದೆ.
ನೌಕರರ ಸಂಘಟನೆಗಳು ತಮ್ಮ ಲಿಖಿತ ಜ್ಞಾಪನಾ ಪತ್ರಗಳನ್ನು ಸಬ್ಮಿಟ್ ಮಾಡಲು ನೀಡಲಾಗಿದ್ದ ಡೆಡ್‌ಲೈನ್ ಅನ್ನು ಜೂನ್ 15, 2026 ರವರೆಗೆ ವಿಸ್ತರಿಸಲಾಗಿತ್ತು, ಅದು ಈಗ ಮುಕ್ತಾಯಗೊಂಡಿದೆ.
ಮುಗಿದ ಸಭೆಗಳು: ಇತ್ತೀಚೆಗಷ್ಟೇ ಮೇ 13 ಮತ್ತು 14 ರಂದು ದೇಶದ ರಾಜಧಾನಿ ದೆಹಲಿಯಲ್ಲಿ ಹಾಗೂ ಮೇ 21 ರಂದು ಉತ್ತರ ಪ್ರದೇಶದ ಲಕ್ನೋದಲ್ಲೂ ಸಹ ನೌಕರರ ಸಂಘಟನೆಗಳೊಂದಿಗೆ ಆಯೋಗವು ಉನ್ನತ ಮಟ್ಟದ ಮಹತ್ವದ ಚರ್ಚೆಗಳನ್ನು ಯಶಸ್ವಿಯಾಗಿ ಮುಗಿಸಿದೆ.
ಮುಂದಿನ ಟಾರ್ಗೆಟ್: ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಜುಲೈ 6 ಮತ್ತು 7 ರಂದು ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜುಲೈ 9 ಮತ್ತು 10 ರಂದು ಮುಂದಿನ ಬಿಗ್ ರೀಜನಲ್ ಮೀಟಿಂಗ್‌ಗಳು ನಿಗದಿಯಾಗಿವೆ.

