HomeInternationalಇರಾನ್ ನಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪ: 7 ಜನ ಸಾವು, 400 ಕ್ಕೂ ಹೆಚ್ಚು...

ಇರಾನ್ ನಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪ: 7 ಜನ ಸಾವು, 400 ಕ್ಕೂ ಹೆಚ್ಚು ಮಂದಿಗೆ ಗಾಯ

ಇರಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಪ್ರಾಥಮಿಕ ಮಾಹಿತಿಗಳ ಪ್ರಕಾರ 7 ಜನ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.9 ರ ತೀವ್ರತೆಯ ಭೂಕಂಪವು ವಾಯುವ್ಯ ಇರಾನ್‌ ಗೆ ಅಪ್ಪಳಿಸಿದೆ.

ಇದುವರೆಗೆ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 440 ಜನರು ಗಾಯಗೊಂಡಿದ್ದಾರೆ. ಇರಾನ್-ಟರ್ಕಿ ಗಡಿಯ ಸಮೀಪವಿರುವ ಖೋಯ್ ನಗರದಲ್ಲಿ ಶನಿವಾರ ರಾತ್ರಿ 9:44 ಕ್ಕೆ(ಸ್ಥಳೀಯ ಕಾಲಮಾನ) ಭೂಕಂಪ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಂಪನಗಳು ಸಾಕಷ್ಟು ಪ್ರಬಲವಾಗಿವೆ ಎಂದು ವರದಿಯಾಗಿದೆ ಮತ್ತು ಇರಾನ್‌ನ ಪಶ್ಚಿಮ ಅಜೆರ್ಬೈಜಾನ್ ಪ್ರಾಂತ್ಯದ ಹಲವು ಪ್ರದೇಶಗಳಲ್ಲಿ ಕಂಪನದ ಅನುಭವವಾಯಿತು. ನೆರೆಯ ಪೂರ್ವ ಅಜೆರ್‌ಬೈಜಾನ್‌ ನ ಪ್ರಾಂತೀಯ ರಾಜಧಾನಿಯಾದ ತಬ್ರಿಜ್ ಸೇರಿದಂತೆ ಹಲವಾರು ನಗರಗಳಲ್ಲಿಯೂ ಭೂಮಿ ಕಂಪಿಸಿದೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ(USGS) ಪ್ರಕಾರ ಭೂಕಂಪವು 23:44:44 (UTC+05:30) ಕ್ಕೆ ಸಂಭವಿಸಿದೆ. ಮತ್ತು 10 ಕಿಮೀ ಆಳದಲ್ಲಿ ಖೋಯ್‌ನಿಂದ 14 ಕಿಮೀ ದಕ್ಷಿಣ-ನೈಋತ್ಯಕ್ಕೆ ಅಪ್ಪಳಿಸಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular