HomeEntertainmentಬಾಲಿವುಡ್ ನ ಈ ಸ್ಟಾರ್ ನಟರ ಬಳಿ ಇದೆ ರೋಲ್ಸ್ ರಾಯ್ಸ್ ಕಾರ್.....!

ಬಾಲಿವುಡ್ ನ ಈ ಸ್ಟಾರ್ ನಟರ ಬಳಿ ಇದೆ ರೋಲ್ಸ್ ರಾಯ್ಸ್ ಕಾರ್…..!

ರೋಲ್ಸ್ ರಾಯ್ಸ್ ಕಾರ್ ಹೊಂದುವುದು ಪ್ರತಿಷ್ಠೆಯ ವಿಷಯವಾಗಿದೆ. ಉದ್ಯಮಿಗಳು, ಸೆಲಬ್ರಿಟಿಗಳು ಸೇರಿದಂತೆ ಕೋಟ್ಯಧಿಪತಿಗಳು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಾರ್ ಹೊಂದಿರುತ್ತಾರೆ. ಅದರಲ್ಲೂ ಬಾಲಿವುಡ್ ಕಲಾವಿದರಲ್ಲಿ ಯಾರ ಬಳಿ ರೋಲ್ಸ್ ರಾಯ್ಸ್ ಇದೆ ಎಂದು ನೋಡೋದಾದ್ರೆ, ಪ್ರಮುಖವಾಗಿ 7 ಮಂದಿ ರೋಲ್ಸ್ ರಾಯ್ಸ್ ಕಾರ್ ಹೊಂದಿದ್ದಾರೆ.

ಅವರ ಪೈಕಿ ಅಮಿತಾಬ್ ಬಚ್ಚನ್ 3.5 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರ್ ಹೊಂದಿದ್ದಾರೆ. ಅಮಿರ್ ಖಾನ್ 6.83 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಗೋಸ್ಟ್ ಹೊಂದಿದ್ದಾರೆ. ಸಂಜಯ್ ದತ್ 6. 95 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಗೋಸ್ಟ್ ಕಾರ್ ಹೊಂದಿದ್ದಾರೆ. ಹೃತಿಕ್ ರೋಷನ್ 7 ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯ್ಸ್ ಗೋಸ್ಟ್ ಸೀರೀಸ್ 2 ಕಾರ್ ಹೊಂದಿದ್ದಾರೆ. ಅಕ್ಷಯ್ ಕುಮಾರ್ ಬಳಿ 10 ಕೋಟಿ ರೂ. ಬೆಲೆಯುಳ್ಳ ರೋಲ್ಸ್ ರಾಯ್ಸ್ ಪ್ಯಾಂಟಮ್ VII ಇದೆ.

6.95 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಕುಲಿನನ್ ಕಾರ್ ಅಜಯ್ ದೇವಗನ್ ಬಳಿಯಿದೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ 10 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಕುಲಿನನ್ ಬ್ಲಾಕ್ ಬ್ಯಾಡ್ಜ್ ಹೊಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular