ಸೋಶಿಯಲ್ ಮೀಡಿಯಾದಲ್ಲಿ ದಿನಾಲೂ ಏನಾದ್ರೂ ಒಂದು ವಿಡಿಯೋ ವೈರಲ್ ಆಗ್ತಾ ಇರುತ್ತೆ. ಆದ್ರೆ ಈಗ ವೈರಲ್ ಆಗಿರೋ ಒಂದು ವಿಡಿಯೋ ಮಾತ್ರ ಎಲ್ಲರನ್ನೂ ನಗಿಸುವಂತೆ ಮಾಡಿದೆ. ಜೆನ್‌ಜೀ (Gen-Z) ಜನರೇಷನ್ ಫಾಸ್ಟ್ ಅನ್ಕೊಂಡ್ರೆ, ಈಗಿನ ಆಲ್ಫಾ ಜನರೇಷನ್ ಮಕ್ಕಳು ಅವರಿಗಿಂತಲೂ ತುಂಬಾ ಜೋರಾಗಿದ್ದಾರೆ ಇದಕ್ಕೆ ಕಾರಣ ಆರು ವರ್ಷದ ಪುಟ್ಟ ಹುಡುಗನೊಬ್ಬ ತನ್ನ ಕ್ಲಾಸ್‌ಮೇಟ್‌ಗೆ ಕೊಟ್ಟಿರೋ ಒಂದು ಕ್ಯೂಟ್ ಲವ್ ಲೆಟರ್.ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ನನ್ನ ಆರು ವರ್ಷದ ಮಗಳಿಗೆ ಮೊದಲ ಲವ್‌ಲೆಟರ್ ಬಂದಿದೆ” ಅಂತ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕ್ಯೂಟ್ ವಿಡಿಯೋದಲ್ಲೇನಿದೆ?
ಆರು ವರ್ಷದ ಯಕ್ಷಿತ್ ಅನ್ನೋ ಪುಟ್ಟ ಹುಡುಗ, ತನ್ನದೇ ವಯಸ್ಸಿನ ಮರ್ಸಿ (Mercy) ಅನ್ನೋ ಹುಡುಗಿಗೆ ಒಂದು ಸಣ್ಣ ಪೇಪರ್ ತುಂಡಿನಲ್ಲಿ “ಐ ಲವ್ ಯೂ” ಅಂತ ಬರೆದುಕೊಟ್ಟಿದ್ದಾನೆ.
ಸ್ಪೆಷಲ್ ಗಿಫ್ಟ್: ಪೇಪರ್‌ನ ಇನ್ನೊಂದು ಬದಿಯಲ್ಲಿ ಮರ್ಸಿ ಹೆಸರನ್ನು ಬರೆದು, ಎರಡು ಕಡೆ ಸಣ್ಣ ಮಕ್ಕಳ ಚಿತ್ರವನ್ನೂ ಬಿಡಿಸಿ ಗಿಫ್ಟ್ ತರ ಕೊಟ್ಟಿದ್ದಾನೆ.
ಮುಗ್ಧ ಉತ್ತರ: ಹುಡುಗಿಯ ಅಮ್ಮ ಇದನ್ನು ಯಾರು ಕೊಟ್ಟರು, ಯಾಕೆ ಕೊಟ್ಟರು?” ಅಂತ ಕೇಳಿದಾಗ, ಆ ಪುಟ್ಟ ಹುಡುಗಿ ತುಂಬಾ ಮುಗ್ಧವಾಗಿ “ನಾನು ಇಷ್ಟ ಅಂತೆ, ಅದಕ್ಕೆ ಕೊಟ್ಟ ಅಂತ ಹೇಳಿದ್ದಾಳೆ.
ಬಾಯ್ ಫ್ರೆಂಡ್ ಸರ್ಟಿಫಿಕೇಟ್: ಅವನು ಒಳ್ಳೆಯವನಾ?”ಅಂತ ಕೇಳಿದ್ದಕ್ಕೆ, ಅವನು ಗುಡ್ ಬಾಯ್, ಆದ್ರೆ ಕೆಲವೊಮ್ಮೆ ಸ್ವಲ್ಪ ತೀಟೆ ಮಾಡ್ತಾನೆ ಅಂತ ಆ ಮಗು ಹೇಳಿರೋದು ವಿಡಿಯೋದಲ್ಲಿದೆ.
ನೆಟ್ಟಿಗರ ಕಾಮಿಡಿ ಕಮೆಂಟ್‌ಗಳು
ಈ ವಿಡಿಯೋ ನೋಡಿ ಜನ ಸುಮ್ಮನೆ ಇರ್ತಾರಾ? ಅದರಲ್ಲೂ ಇನ್ನು ಮದುವೆಯಾಗದೇ ಸಿಂಗಲ್ ಇರೋ ’90s ಕಿಡ್ಸ್’ ಅಂತೂ ಯಕ್ಷಿತ್ ಕಾಲೆಳೆಯಲು ಶುರು ಮಾಡಿದ್ದಾರೆ. ವೈರಲ್ ಆದ ಕೆಲವು ಮಜಾವಾದ ಕಮೆಂಟ್‌ಗಳು ಇಲ್ಲಿವೆ:
ಇವರನ್ನೆಲ್ಲ ನೋಡಿದ್ರೆ ನಾವೆಲ್ಲ ಬರೀ ದೇಶದ ಜನಸಂಖ್ಯೆ ಲೆಕ್ಕ ಹಾಕೋಕೆ (ಜನಗಣತಿಗೆ) ಮಾತ್ರ ಹುಟ್ಟಿದ್ದೀವಿ ಅನ್ಸುತ್ತೆ ಅಂತ ಒಬ್ಬರು ಬೇಸರ ಮಾಡ್ಕೊಂಡಿದ್ದಾರೆ.
ಒಳ್ಳೆ ಕೆಲಸ ಮಾಡಿದ್ಯಾ ಯಕ್ಷಿತ್, ಮೊದಲೇ ಮದುವೆಗೆ ಹೆಣ್ಣು ಸಿಗುತ್ತಿಲ್ಲ, ನೀನು ಈಗಲೇ ಅಡ್ವಾನ್ಸ್ ಬುಕಿಂಗ್ ಮಾಡ್ಕೊಂಡಿದ್ದೀಯಾ ಸಿಸ್ಟರ್, ಈಗಲೇ ಮಾತುಕತೆ ನಡೆಸಿ ಮದುವೆ ಫಿಕ್ಸ್ ಮಾಡಿ ಅಂತ ಮತ್ತೊಬ್ಬರು ಕಾಲೆಳೆದಿದ್ದಾರೆ.
ನಿನ್ನ ವಯಸ್ಸಿನಲ್ಲಿ ನಾವೆಲ್ಲಾ ಎಂಟಾಣೆ (50 ಪೈಸೆ) ಚಾಕೊಲೇಟ್‌ಗಾಗಿ ಅಳ್ತಾ ಇದ್ವಿ, ನೀನು ನೋಡಿದ್ರೆ ವಯಸ್ಸಿಗೆ ಮೀರಿದ ಕೈ ಹಾಕಿದ್ದೀಯಾ, ನಿನ್ನ ಪಾದದ ಜೆರಾಕ್ಸ್ ಕೊಟ್ಟುಬಿಡಪ್ಪ ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ.
ಸಿಂಗಲ್ ಇರೋ ಹುಡುಗರಿಗೆ ಸೂರ್ಯವಂಶ ಸಿನಿಮಾದ ಗಸಗಸೆ ಪಾಯಸ ಕೊಟ್ಟುಬಿಟ್ಟೆ ಅಲ್ವಾ ಯಕ್ಷಿತ್ ಅಂತ ಕುಮಾರ್ ಅನ್ನೋರು ವ್ಯಂಗ್ಯವಾಡಿದ್ದಾರೆ.
ಮಗಳಿಗೆ ಈಗ ಆರು ವರ್ಷ ಇರೋದಕ್ಕೆ ಅಮ್ಮ ಇಷ್ಟು ಸಾಫ್ಟ್ ಆಗಿ ಮಾತಾಡ್ತಿದ್ದಾರೆ. ಅದೇ ಹದಿನಾರನೇ ವಯಸ್ಸಿಗೆ ಈ ತರ ಚೀಟಿ ಬಂದಿದ್ರೆ ಮನೆಯಲ್ಲಿ ರಣಚಂಡಿ ಅವತಾರ ಆಗ್ತಿತ್ತು ಅಂತ ಇನ್ನೊಬ್ಬರು ವಾಸ್ತವ ನೆನಪಿಸಿದ್ದಾರೆ.
ಒಟ್ಟಿನಲ್ಲಿ ಆರು ವರ್ಷದ ಮಕ್ಕಳ ಈ ಮುಗ್ಧ ಪ್ರೀತಿ ಮತ್ತು ಅದಕ್ಕೆ ಬಂದಿರೋ ಕಮೆಂಟ್‌ಗಳು ಈಗ ಇಡೀ ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯದ ಹೊನಲನ್ನೇ ಹರಿಸಿದೆ.

