
ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ತುರ್ತು ಆರೋಗ್ಯ ಸೇವೆಗಳು ವರದಿ ಮಾಡಿವೆ
ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ನಡೆಸಿದ ದಾಳಿಯಿಂದ ಆಘಾತವಾಗಿದೆ ಎಂದು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಶನಿವಾರ ಹೇಳಿದ್ದಾರೆ.
“ಇಸ್ರೇಲಿ ನಾಗರಿಕರ ವಿರುದ್ಧ ಹಮಾಸ್ ಭಯೋತ್ಪಾದಕರು ಇಂದು ಬೆಳಿಗ್ಗೆ ನಡೆಸಿದ ದಾಳಿಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳಲು ಸಂಪೂರ್ಣ ಹಕ್ಕನ್ನು ಹೊಂದಿದೆ. ನಾವು ಇಸ್ರೇಲಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಇಸ್ರೇಲ್ನಲ್ಲಿರುವ ಬ್ರಿಟಿಷ್ ಪ್ರಜೆಗಳು ಪ್ರಯಾಣದ ಸಲಹೆಯನ್ನು ಅನುಸರಿಸಬೇಕು” ಎಂದು ಸುನಕ್ ಹೇಳಿದ್ದಾರೆ.

