HomeLatest Newsಮಲಬದ್ಧತೆ, ಹೊಟ್ಟೆ ಉಬ್ಬರ ಕಾಡ್ತಿದೆಯೇ?ಗ್ಯಾಸ್ಟ್ರೋಎಂಟರಾಲಜಿಸ್ಟ್ ಶಿಫಾರಸು ಮಾಡಿದ 5 ಸೂಪರ್ ಹಣ್ಣುಗಳು ಇಲ್ಲಿವೆ

ಮಲಬದ್ಧತೆ, ಹೊಟ್ಟೆ ಉಬ್ಬರ ಕಾಡ್ತಿದೆಯೇ?ಗ್ಯಾಸ್ಟ್ರೋಎಂಟರಾಲಜಿಸ್ಟ್ ಶಿಫಾರಸು ಮಾಡಿದ 5 ಸೂಪರ್ ಹಣ್ಣುಗಳು ಇಲ್ಲಿವೆ

ನವದೆಹಲಿ: ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳಿವೆ. ವಿಶೇಷವಾಗಿ ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲವಿಸರ್ಜನೆ ಸರಾಗವಾಗಲು ಹಣ್ಣುಗಳು ಹೆಚ್ಚು ಸಹಾಯ ಮಾಡುತ್ತವೆ. ಆದರೆ, ಮಲಬದ್ಧತೆಯಂತಹ (Constipation) ಸಮಸ್ಯೆ ಎದುರಾದಾಗ, ಸಾಮಾನ್ಯ ಹಣ್ಣುಗಳಿಗಿಂತ ಕೆಲವು ನಿರ್ದಿಷ್ಟ ಹಣ್ಣುಗಳು ಅತ್ಯಂತ ವೇಗವಾಗಿ ಪರಿಹಾರ ನೀಡುತ್ತವೆ.

ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್ ಮತ್ತು ಏಮ್ಸ್ (AIIMS) ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದಿರುವ, ಕ್ಯಾಲಿಫೋರ್ನಿಯಾ ಮೂಲದ ಪ್ರಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ (ಹೊಟ್ಟೆ ಮತ್ತು ಜೀರ್ಣಕ್ರಿಯೆ ತಜ್ಞ) ಡಾ. ಸೌರಭ್ ಸೇಥಿ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಲಬದ್ಧತೆಯಿಂದ ತಕ್ಷಣ ರಿಲೀಫ್ ನೀಡುವ 5 ಪವರ್‌ಫುಲ್ ಹಣ್ಣುಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಆ ಹಣ್ಣುಗಳು ಯಾವುವು ನೋಡೋಣ

ಮಲಬದ್ಧತೆ ನಿವಾರಿಸುವ ಆ 5 ಮ್ಯಾಜಿಕಲ್ ಹಣ್ಣುಗಳು ಇಲ್ಲಿವೆ:

ಕಿವಿ ಹಣ್ಣು (Kiwi)

ಡಾ. ಸೇಥಿ ಅವರ ಪ್ರಕಾರ, ಕಿವಿ ಹಣ್ಣಿನಲ್ಲಿ ನಾರಿನಂಶ (Fibre), ವಿಟಮಿನ್ ಸಿ ಮತ್ತು ಜೀರ್ಣಕಾರಿ ಕಿಣ್ವಗಳು (Digestive Enzymes) ಸಮೃದ್ಧವಾಗಿವೆ. ಇವು ಮಲಬದ್ಧತೆ ಮಾತ್ರವಲ್ಲದೆ ಹೊಟ್ಟೆ ಉಬ್ಬರ (Bloating) ಸಮಸ್ಯೆಯನ್ನೂ ಕಡಿಮೆ ಮಾಡುತ್ತವೆ. ಗಾತ್ರದಲ್ಲಿ ಸಣ್ಣದಾಗಿದ್ದರೂ, ಕೇವಲ ಎರಡು ಕಿವಿ ಹಣ್ಣುಗಳನ್ನು ತಿಂದರೆ ದೇಹಕ್ಕೆ ಸುಮಾರು 4 ಗ್ರಾಂನಷ್ಟು ನಾರಿನಂಶ ಸಿಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೇರಳೆ ಹಣ್ಣು

ಪೇರಳೆ ಹಣ್ಣಿನಲ್ಲಿ ಸೋರ್ಬಿಟೋಲ್ (Sorbitol) ಎಂಬ ಸಂಯುಕ್ತವಿದ್ದು, ಇದು ನಮ್ಮ ದೇಹದಲ್ಲಿ ಸುಲಭವಾಗಿ ಹೀರಲ್ಪಡುವುದಿಲ್ಲ. ಹೀಗಾಗಿ ಇದು ನೈಸರ್ಗಿಕ ಮಲವಿಸರ್ಜಕದಂತೆ ಕೆಲಸ ಮಾಡುತ್ತದೆ. ಇದರಲ್ಲಿ ನಾರಿನಂಶವೂ ಹೆಚ್ಚಾಗಿದ್ದು, ಒಂದು ಮಧ್ಯಮ ಗಾತ್ರದ ಪೇರಳೆ ಹಣ್ಣಿನಿಂದ ಸುಮಾರು 6 ಗ್ರಾಂ ನಾರಿನಂಶ ಲಭ್ಯವಾಗುತ್ತದೆ.

ಸೇಬು ಹಣ್ಣು (Apple)

ಸೇಬು ಹಣ್ಣಿನ ಸಿಪ್ಪೆಯಲ್ಲಿ ಪೆಕ್ಟಿನ್(Pectin) ಎಂಬ ಅಂಶವಿರುತ್ತದೆ. ಡಾ. ಸೇಥಿ ಅವರ ಪ್ರಕಾರ, “ಕ್ಟಿನ್ ಅಂಶವು ಕರುಳಿನಲ್ಲಿ ಮಲವು ಸಾಗುವ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ”. ಒಂದು ಮಧ್ಯಮ ಗಾತ್ರದ ಸೇಬಿನಲ್ಲಿ ಸುಮಾರು 4 ಗ್ರಾಂ ನಾರಿನಂಶ ಇರುತ್ತದೆ.

ಡ್ರ್ಯಾಗನ್ ಫ್ರೂಟ್ (Dragon Fruit)

ನೋಡಲು ವಿಭಿನ್ನವಾಗಿದ್ದರೂ ಡ್ರ್ಯಾಗನ್ ಫ್ರೂಟ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ ಮತ್ತು ಹೇರಳವಾದ ನಾರಿನಂಶ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಒಂದು ಕಪ್ ಡ್ರ್ಯಾಗನ್ ಫ್ರೂಟ್ ಸೇವಿಸಿದರೆ ಸುಮಾರು 5.6 ಗ್ರಾಂ ನಾರಿನಂಶ ದೇಹಕ್ಕೆ ಸೇರುತ್ತದೆ.

ಪರಂಗಿ ಹಣ್ಣು

ನಮ್ಮ ದೇಶದಲ್ಲಿ ಸುಲಭವಾಗಿ ಸಿಗುವ ಪಪಾಯ, ಹೊಟ್ಟೆಯ ಆರೋಗ್ಯಕ್ಕೆ ಅಮೃತವಿದ್ದಂತೆ. ಇದರಲ್ಲಿ ನೀರಿನಾಂಶ, ನಾರಿನಂಶ, ವಿಟಮಿನ್ ಸಿ ಜೊತೆಗೆ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುವ ಪ್ರಮುಖ ಜೀರ್ಣಕಾರಿ ಕಿಣ್ವಗಳಿವೆ. ಒಂದು ಕಪ್ ಪಪಾಯ ಕ್ಯೂಬ್ಸ್‌ನಲ್ಲಿ ಸುಮಾರು 2.5 ಗ್ರಾಂ ನಾರಿನಂಶ ಇರುತ್ತದೆ.

https://www.instagram.com/p/DZk8eJQiE97/?utm_source=ig_web_copy_link&igsh=NTc4MTIwNjQ2YQ==

ಜೀರ್ಣಕ್ರಿಯೆಗೆ ನಾರಿನಂಶ (Fibre) ಯಾಕೆ ಇಷ್ಟೊಂದು ಮುಖ್ಯ?

ಮೇಲಿನ ಪಟ್ಟಿಯನ್ನು ನೋಡಿದರೆ ಎಲ್ಲ ಹಣ್ಣುಗಳಲ್ಲೂ ನಾರಿನಂಶ (Fibre) ಹೆಚ್ಚಿರುವುದು ತಿಳಿಯುತ್ತದೆ. ಹಾಗಾಗಿ ನಾರಿನಂಶಕ್ಕೂ ಮತ್ತು ಹೊಟ್ಟೆಯ ಆರೋಗ್ಯಕ್ಕೂ ನೇರ ಕನೆಕ್ಷನ್ ಇದೆ. ಮಾಯೋ ಕ್ಲಿನಿಕ್ (Mayo Clinic) ವೆಬ್‌ಸೈಟ್ ಪ್ರಕಾರ, ನಾರಿನಂಶವು ಸಸ್ಯ ಆಧಾರಿತ ಮ್ಯಾಕ್ರೋನ್ಯೂಟ್ರಿಯೆಂಟ್ ಆಗಿದ್ದು, ನಮ್ಮ ದೇಹ ಇದನ್ನು ನೇರವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಇದು ಪೂರ್ಣ ಸಹಾಯ ಮಾಡುತ್ತದೆ. ಇದರಲ್ಲಿ ಎರಡು ವಿಧಗಳಿವೆ:

ಕರಗುವ ನಾರು (Soluble Fibre): ಇದು ನೀರಿನಲ್ಲಿ ಕರಗುತ್ತದೆ ಮತ್ತು ಹೊಟ್ಟೆಯಲ್ಲಿ ಜೆಲ್ ತರಹದ ವಸ್ತುವನ್ನು ನಿರ್ಮಿಸಿ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆ ಮಟ್ಟವನ್ನು (Blood Sugar) ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕರಗದ ನಾರು (Insoluble Fibre): ಇದು ನೀರಿನಲ್ಲಿ ಕರಗುವುದಿಲ್ಲ. ಆದರೆ ಜೀರ್ಣಾಂಗ ವ್ಯವಸ್ಥೆಯ ಮೂಲಕ ತ್ಯಾಜ್ಯ ವಸ್ತುಗಳು ಸುಲಭವಾಗಿ ಚಲಿಸುವಂತೆ ಮಾಡುತ್ತದೆ ಮತ್ತು ಮಲಕ್ಕೆ ಸಾಂದ್ರತೆಯನ್ನು (Bulk) ನೀಡುತ್ತದೆ. ಆದ್ದರಿಂದ, ಮಲಬದ್ಧತೆಯಿಂದ ಬಳಲುತ್ತಿರುವ ಜನರಿಗೆ ಈ ಕರಗದ ನಾರಿನಂಶವೇ ಅತ್ಯಂತ ಅವಶ್ಯಕವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular