
ಚೌಕಾಶಿ ಇಲ್ಲ: ನಿಮ್ಮ ಸ್ನೇಹಿತ ಎಂದಿಗೂ ಪ್ರತಿಯಾಗಿ ಏನನ್ನೂ ನಿರೀಕ್ಷಿಸುವುದಿಲ್ಲ. ನಿಮ್ಮ ಸ್ನೇಹಿತ ತನ್ನ ಸಮಯ, ಪ್ರೀತಿಯನ್ನು ನಿಮ್ಮ ಜೊತೆ ಹೊಂದಿದ್ದರೆ, ಅಂಥ ಸ್ನೇಹಿತರನ್ನು ಎಂದಿಗೂ ಬಿಡಬಾರದು. ಸ್ನೇಹದ ವಿಷಯದಲ್ಲಿ ಚೌಕಾಶಿಯೇ ಇಲ್ಲ.
ನಂಬಲರ್ಹ: ನೀವು ನಿಮ್ಮ ಸ್ನೇಹಿತನನ್ನು ನಂಬಲು ಸಾಧ್ಯವಾದರೆ ಮತ್ತು ನಿಮ್ಮ ಎಲ್ಲಾ ಏರಿಳಿತಗಳಲ್ಲಿ ನಿಮಗೆ ಬೆಂಬಲ ನೀಡಿದರೆ, ಯಾವುದೇ ಸಂದರ್ಭಗಳು ಇರಲಿ, ಆ ಸ್ನೇಹಿತನನ್ನು ಎಂದಿಗೂ ನಿಮ್ಮ ಜೀವನದಿಂದ ಕಳೆದುಕೊಳ್ಳದಿರಿ.
ಕಾಳಜಿ ಮತ್ತು ಆಸಕ್ತಿ: ನಿಮ್ಮ ನಿಜವಾದ ಸ್ನೇಹಿತರು ನಿಮ್ಮ ಆಸಕ್ತಿಯ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರು ಯಾರ ಮಾತನ್ನೂ ಕೇಳದೆ ಕೇವಲ ನಿಮ್ಮ ಮಾತನ್ನಷ್ಟೇ ಕೇಳುತ್ತಾರೆ. ನಿಮ್ಮ ಯಶಸ್ಸನ್ನು ತಮ್ಮ ಯಶಸ್ಸಿನಂತೆ ಸಂಭ್ರಮಿಸುತ್ತಾರೆ.
ಪ್ರಾಮಾಣಿಕತೆ: ಏನೇ ಇರಲಿ, ನಿಜವಾದ ಸ್ನೇಹಿತರು ನಿಮ್ಮ ಬಳಿಗೆ ಹಿಂತಿರುಗುತ್ತಾರೆ. ನಿಮಗೆ ಸತ್ಯವನ್ನೇ ಹೇಳುತ್ತಾರೆ. ಅವರು ಸ್ಪಷ್ಟ ಸಂವಹನವನ್ನು ಗೌರವಿಸುತ್ತಾರೆ. ಬೇರೆಯವರ ಮಾತು ಕೇಳಿ ನಿಮ್ಮ ಸ್ನೇಹವನ್ನು ಕಳೆದುಕೊಳ್ಳುವುದಿಲ್ಲ.
ಬೆಂಬಲ: ಅಗತ್ಯವಿರುವ ಸಮಯದಲ್ಲಿ ನಿಜವಾದ ಸ್ನೇಹಿತರು ನಿಮ್ಮೊಂದಿಗೆ ಇರುತ್ತಾರೆ. ನಿಮ್ಮ ಭಾವನೆಗಳು ಮತ್ತು ಅನುಭವಗಳೊಂದಿಗೆ ಸಹಾನುಭೂತಿ ಹೊಂದುತ್ತಾರೆ. ನಿಮ್ಮ ಬಗ್ಗೆ ಬೇರೆಯವರು ಏನೇ ಹೇಳಿದ್ರೂ ಅವರನ್ನು ವಿರೋಧಿಸಿ ನಿಮ್ಮ ಪರವಾಗಿ ಮಾತನಾಡುತ್ತಾರೆ. ಕಷ್ಟದಲ್ಲಿ ಬೆಂಬಲವಾಗಿರುತ್ತಾರೆ.

