ತಾಯಿಯೊಂದಿಗೆ ಹೊಲಕ್ಕೆ ಹೋದಾಗಲೇ ಅವಘಡ: ತೆರೆದ ಬೋರ್ ವೆಲ್ ಗೆ ಬಿದ್ದ 3 ವರ್ಷದ ಮಗು

ಬಿಹಾರದ ನಳಂದದ ಕುಲ್ ಗ್ರಾಮದಲ್ಲಿ ಭಾನುವಾರ 3 ವರ್ಷದ ಬಾಲಕ ಬೋರ್‌ ವೆಲ್‌ ಗೆ ಬಿದ್ದಿದ್ದಾನೆ. ಮಗು 100 ಅಡಿ ಆಳ ತೆರೆದ ಬೋರ್‌ ವೆಲ್‌ ಗೆ ಬಿದ್ದು ಸುಮಾರು 40-50 ಅಡಿ ಆಳದಲ್ಲಿ ಸಿಲುಕಿಕೊಂಡಿದೆ. ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. NDRF ಮತ್ತು ಇತರ ರಕ್ಷಣಾ ತಂಡಗಳು ಮಗುವನ್ನು ರಕ್ಷಿಸಲು ಸ್ಥಳದಲ್ಲಿವೆ.

ಮಗುವೊಂದು ಬೋರ್‌ವೆಲ್‌ಗೆ ಬಿದ್ದಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಮಗುವನ್ನು ರಕ್ಷಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಎನ್‌ಡಿಆರ್‌ಎಫ್ ಮತ್ತು ರಕ್ಷಣಾ ತಂಡವು ಸ್ಥಳಕ್ಕೆ ತಲುಪಲಿದೆ. ಮಗು ಇನ್ನೂ ಜೀವಂತವಾಗಿದೆ, ಮಗುವಿನ ಧ್ವನಿಯನ್ನು ನಾವು ಕೇಳುತ್ತಿದ್ದೇವೆ ಎಂದು ಸಿಲ್ವಾ ಸರ್ಕಲ್ ಅಧಿಕಾರಿ ಶಂಭು ಮಂಡಲ್ ತಿಳಿಸಿದ್ದಾರೆ.

ಮಗುವಿನ ತಾಯಿ ಹೊಲಕ್ಕೆ ಕೆಲಸಕ್ಕೆ ಬಂದಿದ್ದು, ಮಗನೂ ಜೊತೆಗೇ ಬಂದಿದ್ದ.ಈ ಸಮಯದಲ್ಲಿ ಮಗು ತೆರೆದ ಬೋರ್‌ ವೆಲ್‌ ಗೆ ಬಿದ್ದಿದೆ ಎಂದು ಮಹಿಳೆ ಹೇಳಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದ ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿ ಬೋರ್‌ ವೆಲ್‌ ಗೆ ಆಮ್ಲಜನಕ ಪೂರೈಕೆಗೆ ಪೈಪ್ ಅಳವಡಿಸಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read