HomeInternationalಮೂವರು ಸಹೋದರಿಯರಿಗೆ ಒಬ್ಬನೇ ಗಂಡ...! ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ

ಮೂವರು ಸಹೋದರಿಯರಿಗೆ ಒಬ್ಬನೇ ಗಂಡ…! ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ

ಕೀನ್ಯಾ: ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣರಾಗಿದ್ದರು. ಇದಕ್ಕೆ ಕಾರಣ, ಕೀನ್ಯಾದ ಸ್ಟೀವೊ ಎಂದು ಗುರುತಿಸಲಾದ ಒಬ್ಬನನ್ನೇ ಈ ಸಹೋದರಿಯರು ಮದುವೆಯಾಗಿದ್ದರು. ಇವರ ವಿಷಯ ಈಗ ಮತ್ತೊಮ್ಮೆ ವೈರಲ್​ ಆಗುತ್ತಿದೆ.

ಈ ಸಹೋದರಿಯರ ಅಗತ್ಯಗಳನ್ನು ಪೂರೈಸುವುದು ತನಗೆ ದೊಡ್ಡ ವಿಷಯವಲ್ಲ ಎಂದು ಸ್ಟೀವೊ ಕೂಡ ಹೆಮ್ಮೆ ಪಡುತ್ತಿದ್ದು, ಇವರ ಮದುವೆಯ ವಿಷಯ ಮತ್ತೊಮ್ಮೆ ಸುದ್ದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವರ ಕುತೂಹಲದ ಲವ್​ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಕೀನ್ಯಾದಲ್ಲಿ ಸ್ಟೀವೊ ಅವರನ್ನು ಮೊದಲು ಭೇಟಿಯಾದವಳು ಕೇಟ್. ಇವರ ನಡುವೆ ಪ್ರೀತಿ ಹುಟ್ಟಿತು. ನಂತರ ಆಕೆ ತನ್ನ ಇಬ್ಬರು ಸಹೋದರಿಯರಿಗೆ ಈತನನ್ನು ಪರಿಚಯಿಸಿದಳು. ಅವರಿಬ್ಬರ ಮೇಲೂ ಸ್ಟೀವೋಗೆ ಪ್ರೀತಿ ಹುಟ್ಟಿತು. ನಂತರ ಈ ವಿಷಯವನ್ನು ತಿಳಿಸಿದಾಗ ಮೂವರು ಸಹೋದರಿಯರೂ ಈತನನ್ನು ಮದುವೆಯಾಗಲು ಒಪ್ಪಿದರು.

ಮದುವೆಯಾಗಿ ವರ್ಷದ ಬಳಿಕ ತಾನು ಮೂರು ಮಹಿಳೆಯರೊಂದಿಗೆ ಆಶೀರ್ವದಿಸಲ್ಪಟ್ಟಿದ್ದೇನೆ ಎಂದು ಸ್ಟೀವೋ ಹೇಳಿದ್ದಾನೆ. “ನಾನು ಮೂವರು ಮಹಿಳೆಯರನ್ನೂ ತೃಪ್ತಿಪಡಿಸುತ್ತಿದ್ದೇನೆ. ತುಂಬಾ ಸಂತೋಷವಾಗಿದ್ದೇನೆ. ಆದರೆ ಜನರು ನನ್ನನ್ನು ಅನುಮಾನಿಸುತ್ತಾರೆ, ಇದು ಏಕೆ ಎಂದು ತಿಳಿಯುವುದಿಲ್ಲ. ಅದರೆ ಇದನ್ನು ದೊಡ್ಡದಾಗಿ ನಾನು ತೆಗೆದುಕೊಂಡಿಲ್ಲ ಎಂದು ನಗುತ್ತಾ ನುಡಿಯುತ್ತಾನೆ ಸ್ಟೀವೋ.

ಸ್ಟೀವೊ ಪ್ರಕಾರ, ಈತ ಸೋಮವಾರ ಮೇರಿಗೆ, ಮಂಗಳವಾರ ಕೇಟ್‌ಗೆ ಮತ್ತು ಬುಧವಾರ ಈವ್‌ಗೆ ಮೀಸಲಿಟ್ಟಿದ್ದಾರೆ. ಮೂವರು ಸಹೋದರಿಯರು ಹೇಗೆ ಕಟ್ಟುನಿಟ್ಟಾದ ವೇಳಾಪಟ್ಟಿಯನ್ನು ಹೊಂದಿಸಿದ್ದಾರೆಂದು ಈತ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾನೆ.

ಅವರಲ್ಲಿ ಯಾರು ಸ್ಟೀವೊ ಅವರೊಂದಿಗೆ ರಾತ್ರಿ ಕಳೆಯಲಿದ್ದಾರೆ ಎಂಬುದನ್ನು ಪರಸ್ಪರ ನಿರ್ಧರಿಸುತ್ತಾರಂತೆ. ಈ ವಿಷಯವನ್ನೂ ಈತ ಬಹಿರಂಗಪಡಿಸಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular