
ನಟ ಅಖಿತ್ ಮಿಶ್ರಾನ ಪತ್ನಿ ಸುಜಾನೆ ಹೈದರಾಬಾದ್ನಲ್ಲಿ ಶೂಟಿಂಗ್ನಲ್ಲಿ ಇದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಪತಿಯ ಸಾವಿನ ವಿಚಾರವಾಗಿ ಮಾತನಾಡಿದ ಅವರು, ತಮ್ಮ ಪತಿಯ ಸಾವಿನ ಬಗ್ಗೆ ಹರಡುತ್ತಿದ್ದ ವಿವಿಧ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸಂದರ್ಶನದಲ್ಲಿ ಸುಝೇನ್ ಬರ್ನೆಟ್ ತನ್ನ ಪತಿ ದಿವಂಗತ ಅಖಿಲ್ ಮಿಶ್ರಾ ತಮ್ಮ ಮುಂಬೈ ನಿವಾಸದಲ್ಲಿರುವ ಅಡಿಗೆ ಮನೆಯಲ್ಲಿ ಬಿದ್ದು ಸಾವನ್ನಪ್ಪಿದ್ದರು. ಅಲ್ಲಿ ವಾಸ್ತವವವಾಗಿ ಯಾವ ಘಟನೆ ನಡೆದಿದೆ ಎಂಬುದು ನನಗೂ ತಿಳಿದಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗುವವರೆಗೂ ಅವರಿಗೆ ಪ್ರಜ್ಞೆ ಇತ್ತು. ನನ್ನ ಸ್ನೇಹಿತರಾದ ವಿಪುಲ್, ಭುವೇಶ್ ಮದನ್ರೊಂದಿಗೆ ಅವರು ಮಾತನಾಡಿದ್ದರು. ಆದರೆ ಭಕ್ತಿ ವೇದಾಂತ ಆಸ್ಪತ್ರೆಯಲ್ಲಿ ಅವರು ತೀವ್ರ ರಕ್ತಸ್ರಾವದಿಂದ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅಖಿಲ್ ಒಬ್ಬ ಒಳ್ಳೆಯ ಮನುಷ್ಯ ಎಂದು ಸುಝೇನ್ ಹೇಳಿದ್ದಾರೆ. ಅವರು ಸ್ವಲ್ಪ ಹಠಮಾರಿ. ಅವರು ಯಾವುದೇ ವಿಚಾರಗಳಲ್ಲಿ ಆಡಂಬರ ಇರಲಿಲ್ಲ. ಆದರೆ ಅವರು ಸರಿಯಾಗಿ ನಿಮ್ಮ ವಾದವನ್ನು ಮಂಡಿಸಿದ್ರೆ ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ತಿದ್ದರು ಎಂದು ಸುಜೇನ್ ಹೇಳಿದ್ದಾರೆ.

