HomeKarnatakaಮದ್ಯಪ್ರಿಯರೇ ಗಮನಿಸಿ: ನಾಳೆಯಿಂದ ಮೂರು ದಿನಗಳ ಕಾಲ ಮದ್ಯದಂಗಡಿ 'ಬಂದ್'

ಮದ್ಯಪ್ರಿಯರೇ ಗಮನಿಸಿ: ನಾಳೆಯಿಂದ ಮೂರು ದಿನಗಳ ಕಾಲ ಮದ್ಯದಂಗಡಿ ‘ಬಂದ್’

 

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 ರ ಬುಧವಾರದಂದು ಮತದಾನ ನಡೆಯಲಿದ್ದು, ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ. ಮತದಾನ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ಬಂದ್ ಆಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇ 10 ರಂದು ಮತದಾನ ನಡೆಯಲಿರುವ ಹಿನ್ನಲೆಯಲ್ಲಿ ಮೇ 8 ರ ಸಂಜೆ 5 ಗಂಟೆಯಿಂದಲೇ ಮದ್ಯದಂಗಡಿಗಳು ಬಂದ್‌ ಆಗಲಿವೆ. ಮೇ 10 ರ ಮಧ್ಯರಾತ್ರಿಯವರೆಗೂ ಇದು ಮುಂದುವರಿಯಲಿದೆ.

ಇನ್ನು ಮತ್ತು ಎಣಿಕೆ ದಿನವಾದ ಮೇ 13 ರಂದು ಅಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯದಂಗಡಿಗಳು ಬಂದ್ ಇರಲಿದ್ದು, ಒಂದು ವೇಳೆ ಮರು ಮತದಾನ ನಡೆದ ಸಂದರ್ಭದಲ್ಲಿ ಅಲ್ಲಿಗೂ ಸಹ ಈ ಆದೇಶ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular