3 ಅಡಿ ಎತ್ತರದ ಯುವಕನಿಗೆ ಪ್ರೇಮಿಗಳ ದಿನವೇ ಮದುವೆ; ಕುಬ್ಜ ಯುವತಿಯೊಂದಿಗೆ ನೆರವೇರಿದೆ ನಿಖಾ….!

ವ್ಯಾಲಂಟೈನ್‌ ದಿನದಂದು ಅನೇಕ ವಿಶಿಷ್ಟ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಿದೆ. ಇದೀಗ ಅಲಿಗಢದಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಕೇವಲ 3 ಅಡಿ ಎತ್ತರದ ವಧು-ವರ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎನ್ನುತ್ತಿದ್ದಾರೆ ಜನರು.

ಅಲಿಗಢದ ಜೀವನಗರ ನಿವಾಸಿ ಇಮ್ರಾನ್ ಕೇವಲ 3 ಅಡಿ ಎತ್ತರವಿದ್ದಾನೆ. ಏಳು ಒಡಹುಟ್ಟಿದವರಲ್ಲಿ ಕಿರಿಯವನಾದ ಇಮ್ರಾನ್ಗೆ ಮದುವೆ ಮಾಡಬೇಕು ಅನ್ನೋದು ಕುಟುಂಬದವರ ಆಸೆ. ಆದರೆ ಕುಳ್ಳನಾಗಿದ್ದಿದ್ದರಿಂದ ವಧು ಸಿಕ್ಕಿರಲಿಲ್ಲ.

26 ವರ್ಷದ ಇಮ್ರಾನ್‌ಗೆ ಕೊನೆಗೂ ಸುಂದರ ವಧು ದೊರೆತಿದ್ದು, ಅಷ್ಟೇ ಎತ್ತರವಿರುವ ಖುಷ್ಬೂ ಜೊತೆಯಲ್ಲಿ ವಿವಾಹ ನೆರವೇರಿದೆ. ವ್ಯಾಲಂಟೈನ್‌ ವೀಕ್‌ನಲ್ಲೇ ಮದುವೆ ನೆರವೇರಿಸುವುದಾಗಿ ಸ್ನೇಹಿತರು ಕೂಡ ಭರವಸೆ ನೀಡಿದ್ದರಂತೆ. ಅದರಂತೆ ಪ್ರೇಮಿಗಳ ದಿನದಂದೇ ಇಮ್ರಾನ್‌ ಹಾಗೂ ಖುಷ್ಬೂ ಮದುವೆಯಾಗಿದ್ದಾರೆ. ಇಮ್ರಾನ್‌ನ ಸೋದರ ಸೋದರಿಯರಿಗೆಲ್ಲ ಈಗಾಗ್ಲೇ ವಿವಾಹವಾಗಿದೆ.

ಕಡಿಮೆ ಎತ್ತರವಿರುವ ಕಾರಣ ವಧು ಸಿಗದೇ ಇಮ್ರಾನ್‌ ಕಂಗಾಲಾಗಿದ್ದ. ಖಾಸಗಿ ಹೋಟೆಲ್ ಒಂದರಲ್ಲಿ ಕಷ್ಟಪಟ್ಟು ಕೆಲಸ ಮಾಡ್ತಿರೋ ಇಮ್ರಾನ್‌ ತನ್ನ ತಾಯಿಯ ಜವಾಬ್ಧಾರಿಯನ್ನೂ ಹೊತ್ತಿದ್ದಾನೆ. ಇದೀಗ ಸೂಕ್ತವಾದ ವಧುವಿನೊಂದಿಗೆ ಮದುವೆಯೂ ನೆರವೇರಿರುವುದರಿಂದ ಇಮ್ರಾನ್‌ ಫುಲ್‌ ಖುಷಿಯಾಗಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read