HomeInternationalBIG NEWS: ಕೆನಡಾದಲ್ಲಿ ವಿಮಾನ ದುರಂತ: ಭಾರತ ಮೂಲದ ಇಬ್ಬರು ಟ್ರೈನಿ ಪೈಲಟ್ ಗಳು ಸೇರಿ...

BIG NEWS: ಕೆನಡಾದಲ್ಲಿ ವಿಮಾನ ದುರಂತ: ಭಾರತ ಮೂಲದ ಇಬ್ಬರು ಟ್ರೈನಿ ಪೈಲಟ್ ಗಳು ಸೇರಿ ಮೂವರು ದುರ್ಮರಣ

ವ್ಯಾಂಕೋವರ್‌: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವ್ಯಾಂಕೋವರ್‌ನಿಂದ 100 ಕಿಲೋಮೀಟರ್ ಪೂರ್ವಕ್ಕೆ ಚಿಲ್ಲಿವಾಕ್‌ನ ಸ್ಥಳೀಯ ವಿಮಾನ ನಿಲ್ದಾಣದ ಬಳಿ ಈ ದುರಂತ ಸಂಭವಿಸಿದೆ. ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿಯು ಘಟನೆಯ ತನಿಖೆಯನ್ನು ಪ್ರಾರಂಭಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೈಪರ್ ಪಿಎ-34 ಸೆನೆಕಾ ಲಘು ವಿಮಾನ ಮರಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ. ಪರಿಣಾಮ ಇಬ್ಬರು ಟ್ರೈನಿ ಪೈಲಟ್ ಗಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಮೃತ ಟ್ರೈನಿ ಪೈಲಟ್ ಗಳು ಭಾರತದ ಮುಂಬೈ ಮೂಲದವರಾಗಿದ್ದಾರೆ. ಅಭಯ್ ಗದ್ರು ಹಾಗೂ ಯಶ್ ವಿಜಯ್ ರಾಮುಗಡೆ ಎಂದು ಗುರುತಿಸಲಾಗಿದೆ. ಇನ್ನೋರ್ವರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ವಿಮಾನ ದುರಂತದ ಬಗ್ಗೆ ಕೆನಡಾ ಸಾರಿಗೆ ಸುರಕ್ಷತಾ ಮಂಡಳಿ ತನಿಖೆಗೆ ಆದೇಶಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular