HomeKarnatakaBIG NEWS: ಈ 2 ದಿನ ರಾಜ್ಯದಲ್ಲಿ ಎಸ್ಕಾಂ ಆನ್ ಲೈನ್ ಸೇವೆ ಸ್ಥಗಿತ

BIG NEWS: ಈ 2 ದಿನ ರಾಜ್ಯದಲ್ಲಿ ಎಸ್ಕಾಂ ಆನ್ ಲೈನ್ ಸೇವೆ ಸ್ಥಗಿತ

ಬೆಂಗಳೂರು: ರಾಜ್ಯದಲ್ಲಿ ಎರಡು ದಿನಗಳ ಕಾಲ ಎಸ್ಕಾಂ ಆನ್ ಲೈನ್ ಸೇವೆ ಸ್ಥಗಿತಗೊಳ್ಳಲಿದೆ. ವೆಬ್ ಪೋರ್ಟಲ್ ಗೆ ಸಂಬಂಧಿಸಿದಂತೆ ತಾಂತ್ರಿಕ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಸ್ಕಾಂ ಆನ್ ಲೈನ್ ಸೇವೆ ಎರಡು ದಿನ ಇರುವುದಿಲ್ಲ.

ನವೆಂಬರ್ 24ರಿಂದ ನವೆಂಬರ್ 26ವರೆಗೆ ಎಸ್ಕಾಂ ಆನ್ ಲೈನ್ ಸೇವೆ ಸ್ಥಗಿತಗೊಳ್ಳಲಿದೆ. ನವೆಂಬರ್ 24ರಂದು ಮಧ್ಯಾಹ್ನ 12ರಿಂದ ನವೆಂಬರ್ 26ರವರ ಬೆಳಿಗ್ಗೆ 11:59ರವರೆಗೆ ಬಂದ್ ಆಗಲಿದೆ. ರಾಜ್ಯದ 5 ಎಸ್ಕಾಂ ಗಳ ವ್ಯಾಪ್ತಿಯಲ್ಲಿ ವೆಬ್ ಪೋರ್ಟಲ್ ಗೆ ಸಂಬಂಧಿಸಿದಂತೆ ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸೇವೆ ಸ್ಥಗಿತಗೊಳ್ಳಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿವಿಧ ಪೋರ್ಟಲ್ ಗಳಲ್ಲಿರುವ ಡಾಟಾವನ್ನು ನೂತನ ಪೋರ್ಟಲ್ ಗೆ ವರ್ಗಾವಣೆ ಮಾಡುವ ಕೆಲಸ ನಡೆಯುವ ಹಿನ್ನೆಲೆಯಲ್ಲಿ ಆನ್ ಲೈನ್ ಸೇವೆ ಸ್ಥಗಿತಗೊಳ್ಳುತ್ತಿದ್ದು, ಈ ಎರಡು ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಸೇವೆ ಇರುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular