ಶಾಲಾ ಆವರಣದಲ್ಲಿ ಮೊಬೈಲ್ ಫೋನ್ಗಳ ಹಾವಳಿ ತಡೆಯಲು ವಿಶ್ವದಾದ್ಯಂತ ಅಭಿಯಾನ ತೀವ್ರಗೊಂಡಿದೆ. ತರಗತಿಗಳಲ್ಲಿ ಮಕ್ಕಳ ಏಕಾಗ್ರತೆ ಕುಸಿಯುತ್ತಿರುವುದು ಮತ್ತು ಸೈಬರ್ ಬುಲ್ಲಿಂಗ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಿಶ್ವದ ಶೇ. 58 ರಷ್ಟು ದೇಶಗಳು ಈಗಾಗಲೇ ಶಾಲೆಗಳಲ್ಲಿ ಮೊಬೈಲ್ ಬಳಕೆಯನ್ನು ಅಧಿಕೃತವಾಗಿ ನಿರ್ಬಂಧಿಸಿವೆ ಎಂದು ಯುನೆಸ್ಕೋ (UNESCO) ವರದಿ ತಿಳಿಸಿದೆ.
ವಿಶೇಷವಾಗಿ ಸಾಮಾಜಿಕ ಜಾಲತಾಣಗಳು ಹದಿಹರೆಯದವರ, ಅದರಲ್ಲೂ ಹೆಣ್ಣುಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದು ಈ ಕಠಿಣ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ. 2023ರಲ್ಲಿ ಕೇವಲ ಶೇ. 24ರಷ್ಟಿದ್ದ ಈ ನಿಷೇಧದ ಪ್ರಮಾಣ, 2026ರ ಮಾರ್ಚ್ ವೇಳೆಗೆ 114 ದೇಶಗಳಿಗೆ ವ್ಯಾಪಿಸಿರುವುದು ಡಿಜಿಟಲ್ ಆತಂಕದ ತೀವ್ರತೆಯನ್ನು ತೋರಿಸುತ್ತಿದೆ. ತರಗತಿಗಳಲ್ಲಿ ಮಕ್ಕಳ ಏಕಾಗ್ರತೆ ಕುಸಿಯುತ್ತಿರುವುದು ಮತ್ತು ಸೈಬರ್ ಬುಲ್ಲಿಂಗ್ (ಜಾಲತಾಣಗಳಲ್ಲಿನ ಕಿರುಕುಳ) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಿಶ್ವದ ಅರ್ಧಕ್ಕಿಂತ ಹೆಚ್ಚು ದೇಶಗಳು ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿರ್ಬಂಧಿಸಿವೆ.
ಯುನೆಸ್ಕೋದ ಗ್ಲೋಬಲ್ ಎಜುಕೇಶನ್ ಮಾನಿಟರಿಂಗ್ (GEM) ತಂಡದ ಪ್ರಕಾರ, ಜೂನ್ 2023 ರಲ್ಲಿ ಕೇವಲ ಶೇ. 24 ರಷ್ಟು ದೇಶಗಳಲ್ಲಿ ಈ ನಿಷೇಧವಿತ್ತು. ಆದರೆ, ಮಾರ್ಚ್ 2026 ರ ವೇಳೆಗೆ ಈ ಪ್ರಮಾಣ ಶೇ. 58ಕ್ಕೆ (114 ದೇಶಗಳು) ಏರಿಕೆಯಾಗಿದೆ.
ಕಾರಣಗಳು: ತರಗತಿಗಳಲ್ಲಿ ಗಮನದ ಕೊರತೆ, ಸೈಬರ್ ಬುಲ್ಲಿಂಗ್ ಮತ್ತು ಮಕ್ಕಳ ಮೇಲೆ ಡಿಜಿಟಲ್ ಪರಿಸರದ ವ್ಯತಿರಿಕ್ತ ಪ್ರಭಾವದ ಬಗ್ಗೆ ಸರ್ಕಾರಗಳು ಕಳವಳ ವ್ಯಕ್ತಪಡಿಸಿವೆ.
ಇತ್ತೀಚಿ ನದೇಶಗಳು: ಬೊಲಿವಿಯಾ, ಕೋಸ್ಟರಿಕಾ, ಕ್ರೊಯೇಷಿಯಾ, ಜಾರ್ಜಿಯಾ, ಮಾಲ್ಡೀವ್ಸ್ ಮತ್ತು ಮಾಲ್ಟಾ ದೇಶಗಳು 2025 ರ ಅಂತ್ಯದ ವೇಳೆಗೆ ರಾಷ್ಟ್ರೀಯ ನಿಷೇಧವನ್ನು ಜಾರಿಗೆ ತಂದಿವೆ. ಫ್ರಾನ್ಸ್ ಈಗಾಗಲೇ ಪ್ರಾಥಮಿಕ ಶಾಲೆಗಳಲ್ಲಿ ಫೋನ್ ನಿಷೇಧಿಸಿದ್ದು, ಈಗ ಇನ್ನೂ ಕಠಿಣ ನಿಯಮಗಳನ್ನು ತರಲು ಯೋಜಿಸುತ್ತಿದೆ.
ಮಾನಸಿಕ ಆರೋಗ್ಯದ ಮೇಲೆ ಪ್ರಭಾವ:
ಸಾಮಾಜಿಕ ಮಾಧ್ಯಮಗಳು ಮಕ್ಕಳ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ವರದಿ ಎಚ್ಚರಿಸಿದೆ.
- ದೇಹದ ಇಮೇಜ್: ಇನ್ಸ್ಟಾಗ್ರಾಮ್ ಬಳಸಿದ ನಂತರ ಶೇ. 32 ರಷ್ಟು ಹದಿಹರೆಯದ ಹುಡುಗಿಯರು ತಮ್ಮ ದೇಹದ ಬಗ್ಗೆ ಕೀಳರಿಮೆ ಹೊಂದಿದ್ದಾರೆ ಎಂದು ಮೆಟಾ (Meta) ಸಂಶೋಧನೆ ತಿಳಿಸಿದೆ.
- ಟಿಕ್ಟಾಕ್ ಆಲ್ಗೊರಿದಮ್: ಟಿಕ್ಟಾಕ್ನಂತಹ ಪ್ಲಾಟ್ಫಾರ್ಮ್ಗಳು ಪ್ರತಿ 39 ಸೆಕೆಂಡಿಗೆ ಒಮ್ಮೆ ದೇಹದ ಇಮೇಜ್ಗೆ ಸಂಬಂಧಿಸಿದ ವಿಷಯಗಳನ್ನು ಮತ್ತು ಪ್ರತಿ ಎಂಟು ನಿಮಿಷಕ್ಕೆ ಒಮ್ಮೆ ಆಹಾರ ಪದ್ಧತಿಯ ಅಸ್ವಸ್ಥತೆ (Eating Disorders) ಪ್ರಚೋದಿಸುವ ವಿಷಯಗಳನ್ನು ಹದಿಹರೆಯದವರಿಗೆ ತಳ್ಳುತ್ತಿವೆ.
ವಿಭಿನ್ನ ನಿಲುವುಗಳು:
ಎಲ್ಲಾ ದೇಶಗಳು ಸಂಪೂರ್ಣ ನಿಷೇಧವನ್ನು ಹೇರಿಲ್ಲ. ಎಸ್ಟೋನಿಯಾ, ಇಂಡೋನೇಷ್ಯಾ, ಪೋಲೆಂಡ್ ಮತ್ತು ಫಿಲಿಪೈನ್ಸ್ನಂತಹ ದೇಶಗಳು ಶಾಲೆಗಳೇ ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಳ್ಳಲು ಅವಕಾಶ ನೀಡಿವೆ. ಅಮೆರಿಕಾದಲ್ಲಿ 39 ರಾಜ್ಯಗಳು ಸ್ಥಳೀಯವಾಗಿ ಫೋನ್ ಬಳಕೆಯನ್ನು ಮಿತಿಗೊಳಿಸುವ ಕ್ರಮಗಳನ್ನು ಕೈಗೊಂಡಿವೆ. 10 ವರ್ಷ ವಯಸ್ಸಿನಲ್ಲೇ ಸಾಮಾಜಿಕ ಮಾಧ್ಯಮದ ಅತಿಯಾದ ಸಂಪರ್ಕಕ್ಕೆ ಬರುವುದು ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

