ಹಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಪ್ರಸ್ತುತ ದಿನಗಳಲ್ಲಿ ಪ್ರಾಮಾಣಿಕ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳ ಮಧ್ಯೆ ಚಾಲಕರೊಬ್ಬರು ಆಸ್ಪತ್ರೆಗೆ ಬಂದಿದ್ದ ಮಹಿಳೆ ಆಟೋದಲ್ಲಿಯೇ ಹಣವಿದ್ದ ತಮ್ಮ ಬ್ಯಾಗ್ ಮರೆತು ಹೋಗಿದ್ದ ವೇಳೆ ಅದನ್ನು ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಶಿವಮೊಗ್ಗ ನಗರದಲ್ಲಿ ಈ ಘಟನೆ ನಡೆದಿದ್ದು, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ತಾವರೆಕೆರೆಯ ಮೊಹಸಿನ್ ಎಂಬವರು ಬಸ್ ನಲ್ಲಿ ಶಿವಮೊಗ್ಗಕ್ಕೆ ಬಂದು ನಾಗರಾಜ್ ಅವರ ಆಟೋದಲ್ಲಿ ತಿಲಕ್ ನಗರದ ಆಸ್ಪತ್ರೆಗೆ ಪ್ರಯಾಣಿಸಿದ್ದರು.

ಈ ಸಂದರ್ಭದಲ್ಲಿ ಅವರು ಆಟೋದಲ್ಲಿಯೇ 8,500 ನಗದು ಇರಿಸಿದ್ದ ತಮ್ಮ ಬ್ಯಾಗನ್ನು ಮರೆತುಬಿಟ್ಟಿದ್ದು, ಇದನ್ನು ಗಮನಿಸಿದ ನಾಗರಾಜ್ ಸಂಚಾರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್, ತಮ್ಮ ಸಿಬ್ಬಂದಿ ನೆರವಿನಿಂದ ಮೊಹಸಿನ್ ಅವರ ಪತ್ತೆ ಹಚ್ಚಿ ಠಾಣೆಗೆ ಕರೆಯಿಸಿಕೊಂಡು ಆಟೋ ಚಾಲಕ ನಾಗರಾಜ್ ಅವರ ಮೂಲಕವೇ ಬ್ಯಾಗ್ ಕೊಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read