HomeLatest Newsಸ್ಪರ್ಧೆಯ ವೇಳೆ ಕಮರಿಗೆ ಬಿದ್ದಿದ್ದ ಸೈಕ್ಲಿಸ್ಟ್ ದುರಂತ ಸಾವು

ಸ್ಪರ್ಧೆಯ ವೇಳೆ ಕಮರಿಗೆ ಬಿದ್ದಿದ್ದ ಸೈಕ್ಲಿಸ್ಟ್ ದುರಂತ ಸಾವು

‘ಟೂರ್ ಆಫ್ ಸ್ವಿಜರ್ಲ್ಯಾಂಡ್’ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸೈಕ್ಲಿಸ್ಟ್ ಒಬ್ಬರು ಕಮರಿಗೆ ಬಿದ್ದಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಫಲಕಾರಿಯಾಗದೆ ಶುಕ್ರವಾರದಂದು ಸಾವನ್ನಪ್ಪಿದ್ದಾರೆ.

ಸ್ವಿಜರ್ಲ್ಯಾಂಡಿನ ಲೌವ್ಸನ್ನೆ ನಿವಾಸಿ 26 ವರ್ಷದ ಗಿನೋ ಮೇಡರ್ ಮೃತಪಟ್ಟವರಾಗಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಅವರು 2,000 ಮೀಟರ್ ಗಳಷ್ಟು ಎತ್ತರದ ಮೂರು ಪರ್ವತಯಾನ ಮುಗಿಸಿದ್ದರು. ಐದನೇ ಹಂತದಲ್ಲಿ ಅವರು ಇಳಿಜಾರಿನಲ್ಲಿದ್ದ ಕಂದಕಕ್ಕೆ ಬಿದ್ದಿದ್ದರು.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಏರ್ ಲಿಫ್ಟ್ ಮಾಡಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸತತ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular