HomeLatest Newsಸುಲಭವಾಗಿ ತಯಾರಾಗುವ ‘ವೈಟ್ ಕೇಕ್’

ಸುಲಭವಾಗಿ ತಯಾರಾಗುವ ‘ವೈಟ್ ಕೇಕ್’

ಕೇಕ್ ಇದ್ದರೆ ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ. ಇಲ್ಲಿ ಸುಲಭದಲ್ಲಿ ಆಗುವಂತಹ ಕೇಕ್ ರೆಸಿಪಿ ಇದೆ ಮಕ್ಕಳಿಗೆ ಮಾಡಿಕೊಡಿ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಕಪ್ – ಸಕ್ಕರೆ, ½ ಕಪ್ – ಬೆಣ್ಣೆ, ಮೊಟ್ಟೆ – 2, 2 ಟೀ ಸ್ಪೂನ್ – ವೆನಿಲ್ಲಾ ಎಸೆನ್ಸ್, 1 ½ ಕಪ್ – ಮೈದಾ ಹಿಟ್ಟು, 1 ¾ ಟೀ ಸ್ಪೂನ್ – ಬೇಕಿಂಗ್ ಪೌಡರ್, ½ ಕಪ್ – ಹಾಲು.

ಮಾಡುವ ವಿಧಾನ:

ಒಂದು ಬೌಲ್ ಗೆ ಸಕ್ಕರೆ ಹಾಗೂ ಬೆಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಕ್ರೀಂ ನ ಹದಕ್ಕೆ ಬರಲಿ. ಮೊಟ್ಟೆಯನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಕದಡಿ. ಹಾಗೇ ಮೈದಾ ಹಾಗೂ ಬೇಕಿಂಗ್ ಪೌಡರ್ ಅನ್ನು ಕೂಡ ಒಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಇದಕ್ಕೆ ಬೆಣ್ಣೆ ಸಕ್ಕರೆಯ ಮಿಶ್ರಣವನ್ನು ಸೇರಿಸಿ ಹಾಗೇ ವೆನಿಲ್ಲಾ ಮೊಟ್ಟೆಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ, ಸ್ವಲ್ಪವೇ ಹಾಲು ಸೇರಿಸಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ನಂತರ ಕೇಕ್ ಮೌಲ್ಡ್ ಗೆ ಹಾಕಿ ಪ್ರೀ ಹೀಟ್ ಮಾಡಿಕೊಂಡ ಓವೆನ್ ನಲ್ಲಿ 40 ನಿಮಿಷಗಳ ಕಾಲ ಬೇಯಿಸಿಕೊಂಡರೆ ರುಚಿಕರವಾದ ಕೇಕ್ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular