HomeEntertainmentಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ ‘ಕಿರಾತಕ-2’: ಜೂ.30 ರಂದು ತೆರೆಗೆ

ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ ‘ಕಿರಾತಕ-2’: ಜೂ.30 ರಂದು ತೆರೆಗೆ

12 ವರ್ಷಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ (actor yash) ನಟಿಸಿದ್ದ ‘ಕಿರಾತಕ’ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡಿತ್ತು. ಮಂಡ್ಯದ ಹಳ್ಳಿ ಭಾಷೆಯ ಸೊಗಡು, ಕಾಮಿಡಿ ಪಂಚ್ ಹಾಗೂ ಸುಂದರ ಪ್ರೇಮ ಕಥೆಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದರು ನಿರ್ದೇಶಕ ಪ್ರದೀಪ್ ರಾಜ್.

ಇದೀಗ ಸದ್ದಿಲ್ಲದೇ ಕಿರಾತಕ-2 (kirataka 2) ಸಿನಿಮಾ ತೆರೆಗೆ ಬರಲು ರೆಡಿಯಾಗುತ್ತಿದೆ. ಈ ಚಿತ್ರಕ್ಕೂ ಪ್ರದೀಪ್ ರಾಜ್ ಡೈರೆಕ್ಷನ್ ಮಾಡಿದ್ದು, ನಿರ್ಮಾಪಕ ಜಯಣ್ಣ ಸಿನಿಮಾ ವಿತರಣೆ ಮಾಡುತ್ತಿದ್ದಾರೆ. ಈ ಹಿಂದೆ ನಟ ಯಶ್ ಕಿರಾತಕ-2 ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ನಟ ಯಶ್ ಈ ಸಿನಿಮಾದಿಂದ ಹಿಂದೆ ಸರಿದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂದಹಾಗೆ ‘ಮೈ ನೇಮ್ ಈಸ್ ಕಿರಾತಕ’ ಚಿತ್ರಕ್ಕೂ ಈಗ ರಿಲೀಸ್ ಗೆ ಸಿದ್ದವಾಗಿರುವ ಚಿತ್ರಕ್ಕೆ ಯಾವುದೇ ಸಂಬಂಧವಿಲ್ಲವಂತೆ. ಯುವ ನಟ ತೇಜಸ್ ‘ಕಿರಾತಕ’- 2 ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಮೈಸೂರಿನಲ್ಲಿ ಸಿನಿಮಾದ ಕಥೆ ಸಾಗಲಿದ್ದು, ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ಕಿರಾತಕ- 2′ ಚಿತ್ರವನ್ನು ಇದೀಗ ಸ್ವತಃ ಜಯಣ್ಣ ವಿತರಣೆ ಮಾಡುತ್ತಿದ್ದು, ಜೂನ್ 30ಕ್ಕೆ ಸಿನಿಮಾ ತೆರೆಗೆ (releasing) ಬರುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular