HomeLatest Newsಸವಿ ಸವಿಯಾ ರವಾ ಸಿಹಿ ಪುರಿ ಮಾಡುವ ವಿಧಾನ

ಸವಿ ಸವಿಯಾ ರವಾ ಸಿಹಿ ಪುರಿ ಮಾಡುವ ವಿಧಾನ

ರವೆಯಿಂದ ಬೇರೆ ಬೇರೆ ತಿಂಡಿಗಳನ್ನು ಮಾಡಬಹುದು. ಅದ್ರಲ್ಲಿ ರವಾ ಸಿಹಿ ಪುರಿ ಕೂಡ ಒಂದು.

ರವಾ ಸಿಹಿ ಪುರಿ ಮಾಡಲು ಬೇಕಾಗುವ ಪದಾರ್ಥ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಕಪ್ ರವೆ, ಒಂದು ಕಪ್ ಸಕ್ಕರೆ, 1/2 ಕಪ್ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, 1 ಸಣ್ಣ ಚಮಚ ಬಿಸಿ ಮಾಡಿದ ಎಣ್ಣೆ, ಅವಶ್ಯಕತೆಗೆ ತಕ್ಕಷ್ಟು ನೀರು, ಒಂದು ಚಮಚ ಕರಿ ಎಳ್ಳು.

ರವಾ ಸಿಹಿ ಪುರಿ ಮಾಡುವ ವಿಧಾನ:

ರವೆಗೆ ಬಿಸಿ ಎಣ್ಣೆ, ಉಪ್ಪು ಹಾಗೂ ಮೊಸರು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ. ನೀರು ಹಾಕಿ ಚೆನ್ನಾಗಿ ಕಲಸಿ.

ಇನ್ನೊಂದು ಪಾತ್ರೆಗೆ ಸಕ್ಕರೆ ಹಾಗೂ ನೀರನ್ನು ಹಾಕಿ. ಬಿಸಿ ಮಾಡಿ ಸಕ್ಕರೆ ಪಾಕ ಮಾಡಿಕೊಳ್ಳಿ.

ನಂತ್ರ ಕಲಸಿಟ್ಟ ರವೆ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ ಡೈಮಂಡ್ ಆಕಾರದಲ್ಲಿ ಲಟ್ಟಿಸಿಕೊಳ್ಳಿ.

ಇನ್ನೊಂದು ಬಾಣೆಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತ್ರ ಲಟ್ಟಿಸಿದ ಪುರಿಯನ್ನು ಎಣ್ಣೆಗೆ ಹಾಕಿ ಕರಿದು ಸಕ್ಕರೆ ಪಾಕಕ್ಕೆ ಹಾಕಿ.

ಸ್ವಲ್ಪ ಹೊತ್ತು ಬಿಟ್ಟು ರವೆ ಸಿಹಿ ಪುರಿಯನ್ನು ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular