HomeInternationalಸತತ 3 ವರ್ಷಗಳಿಂದ ಸಂಗಾತಿಯ ಹುಡುಕಾಟದಲ್ಲಿದ್ದಾಳೆ ಮಹಿಳೆ, ಸಾವಿರ ಪುರುಷರನ್ನು ಈಕೆ ತಿರಸ್ಕರಿಸಿದ್ದೇಕೆ ಗೊತ್ತಾ.....?

ಸತತ 3 ವರ್ಷಗಳಿಂದ ಸಂಗಾತಿಯ ಹುಡುಕಾಟದಲ್ಲಿದ್ದಾಳೆ ಮಹಿಳೆ, ಸಾವಿರ ಪುರುಷರನ್ನು ಈಕೆ ತಿರಸ್ಕರಿಸಿದ್ದೇಕೆ ಗೊತ್ತಾ…..?

ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆ್ಯಪ್‌ನಲ್ಲಿ ಸಂಗಾತಿಯನ್ನು ಹುಡುಕುವ ಟ್ರೆಂಡ್‌ ಜಾಸ್ತಿಯಾಗಿದೆ. ಸಂಗಾತಿಯ ಹುಡುಕಾಟದಲ್ಲಿರುವವರು ತಮ್ಮ ಮಾಹಿತಿಯನ್ನು ಅಲ್ಲಿ ಹಂಚಿಕೊಳ್ಳುತ್ತಾರೆ, ತಮ್ಮ ಷರತ್ತುಗಳನ್ನು ಒಪ್ಪಿ ಇಷ್ಟಪಡುವವರನ್ನು ಆಯ್ಕೆ ಮಾಡಿಕೊಳ್ತಾರೆ. ಇಲ್ಲೊಬ್ಬಳು ಮಹಿಳೆ ಡೇಟಿಂಗ್‌ ಆಪ್‌ನಲ್ಲಿ ಕಳೆದ 3 ವರ್ಷಗಳಿಂದ ಸಂಗಾತಿಯ ಹುಡುಕಾಟದಲ್ಲಿದ್ದಾಳೆ. ಈವರೆಗೂ ಆಕೆಗೆ ಸೂಕ್ತ ವರ ಸಿಕ್ಕಿಲ್ಲ. ಈಗಾಗ್ಲೇ ಸುಮಾರು ಒಂದು ಸಾವಿರ ಜನರನ್ನು ಈಕೆ ತಿರಸ್ಕರಿಸಿದ್ದಾಳೆ.

ಈ ಮಹಿಳೆಗೆ 41 ವರ್ಷ, ಹೆಸರು ಕ್ಲೇರ್ ಡಿ. ಬ್ರಿಟನ್‌ ಮೂಲದ ಮಹಿಳೆ ಇವಳು. 2020 ರಲ್ಲಿ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ, ಕ್ಲೇರ್‌ಗೆ ಒಬ್ಬ ಮಗಳೂ ಇದ್ದಾಳೆ. ಎರಡನೇ ಮದುವೆಗಾಗಿ ಕ್ಲೇರ್‌ ವರನ ಹುಡುಕಾಟದಲ್ಲಿದ್ದಾಳೆ. ಆದರೆ ಇವಳ ಷರತ್ತಿಗೆ ತಕ್ಕಂತಹ ಸಂಗಾತಿ ಮಾತ್ರ ಸಿಗುತ್ತಿಲ್ಲ. ಈಕೆಯನ್ನು ಮದುವೆಯಾಗಲು ಬಯಸುವ ವ್ಯಕ್ತಿ ಅವಳದ್ದೇ ವಯಸ್ಸಿನವನಾಗಿರಬೇಕಂತೆ. ಜೊತೆಗೆ ಆತನ ಎತ್ತರ 6 ಅಡಿ ಇರಬೇಕು. ಬೊಕ್ಕತಲೆಯವರಾಗಿರಬಾರದು, ವಿಚ್ಛೇದಿತ ಪುರುಷರನ್ನೂ ಈಕೆ ತಿರಸ್ಕರಿಸುತ್ತಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಷ್ಟೇ ಅಲ್ಲ ಬಹುಮುಖ್ಯವಾದ ಷರತ್ತು ಎಂದರೆ ಆತ ಶ್ರೀಮಂತನಾಗಿರಬೇಕು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದೇಕೆ ಎಂಬುದನ್ನು ಕ್ಲೇರ್‌ ಬಹಿರಂಗಪಡಿಸಿಲ್ಲ. ನಿರಂತರವಾಗಿ ತನಗಾಗಿ ಹೊಸ ಸಂಗಾತಿಯನ್ನು ಹುಡುಕುತ್ತಲೇ ಇದ್ದಾಳೆ. ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಅನೇಕ ಜನರೊಂದಿಗೆ ಸಂವಹನ ನಡೆಸಿದ್ದಾಳೆ, ಆದರೆ ಯಾರೂ ಅವಳ ಷರತ್ತುಗಳನ್ನು ಪೂರೈಸಲು ಒಪ್ಪಿಲ್ಲ. ಹಾಗಾಗಿ ಅವಳು ಸುಮಾರು ಒಂದು ಸಾವಿರ ಜನರನ್ನು ತಿರಸ್ಕರಿಸಿದ್ದಾಳೆ. ಶೀಘ್ರದಲ್ಲೇ ಒಳ್ಳೆಯ ಸಂಗಾತಿ ಸಿಗುವ ಭರವಸೆ ಮಹಿಳೆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular