HomeLatest Newsಸಂಕ್ರಾಂತಿಗೆ ಮಾಡಿ ಸಿರಿಧಾನ್ಯದ ‘ಸಿಹಿ ಪೊಂಗಲ್’

ಸಂಕ್ರಾಂತಿಗೆ ಮಾಡಿ ಸಿರಿಧಾನ್ಯದ ‘ಸಿಹಿ ಪೊಂಗಲ್’

ಸಂಕ್ರಾಂತಿಗೆ ಪೊಂಗಲ್ ಮಾಡಬೇಕೆಂದುಕೊಂಡಿರಾ…? ಇಲ್ಲಿ ಸಿರಿಧಾನ್ಯ ಬಳಸಿ ಮಾಡುವ ರುಚಿಕರವಾದ ಸಿಹಿ ಪೊಂಗಲ್ ಇದೆ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಊದಲು ಅಕ್ಕಿ-1/2 ಕಪ್, ಹೆಸರುಬೇಳೆ-2 ಟೇಬಲ್ ಸ್ಪೂನ್, ಬೆಲ್ಲದ ಪುಡಿ-1/2 ಕಪ್. ತುಪ್ಪ-3 ಟೇಬಲ್ ಸ್ಪೂನ್, ಏಲಕ್ಕಿ-1,ಲವಂಗ-1, ಗೋಡಂಬಿ-6.

ಮಾಡುವ ವಿಧಾನ:

ಕುಕ್ಕರ್ ಗೆ 1 ಟೀ ಸ್ಪೂನ್ ತುಪ್ಪ ಹಾಕಿ ಅದಕ್ಕೆ ಹೆಸರುಬೇಳೆ ಹಾಕಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ ತೊಳೆದ ಊದಲು ಅಕ್ಕಿಯನ್ನು ಹಾಕಿ 2 ಕಪ್ ನೀರು ಸೇರಿಸಿ 4 ವಿಷಲ್ ಕೂಗಿಸಿಕೊಳ್ಳಿ. ಆಮೇಲೆ ಬೆಲ್ಲದ ಪುಡಿ ಹಾಕಿ ಚೆನ್ನಾಗಿ ಕರಗಿಸಿಕೊಳ್ಳಿ. ಒಂದು ಪ್ಯಾನ್ ಗೆ ತುಪ್ಪ ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದುಕೊಂಡು ಪೊಂಗಲ್ ಗೆ ಸೇರಿಸಿ, ಏಲಕ್ಕಿ ಪುಡಿ ಉದುರಿಸಿದರೆ ರುಚಿಕರವಾದ ಸಿರಿಧಾನ್ಯದ ಪೊಂಗಲ್ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular