ʼವೀಳ್ಯದೆಲೆʼ ದೂರ ಮಾಡುತ್ತೆ ಕಾಯಿಲೆ

ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಮಹತ್ತರವಾದ ಸ್ಥಾನವಿದೆ. ಪಾನ್ ರೂಪದಲ್ಲಿ ಇದನ್ನು ಜಗಿಯುವುದು ಮಾತ್ರವಲ್ಲ ಬಹುತೇಕ ಎಲ್ಲ ಪೂಜೆ ಪುನಸ್ಕಾರಗಳಲ್ಲೂ ಮೊದಲ ಪಂಕ್ತಿಯಲ್ಲಿ ಬಳಕೆಯಾಗುತ್ತದೆ. ಇದರಿಂದ ಆರೋಗ್ಯದ ಪ್ರಯೋಜನಗಳೂ ಇವೆ.

ಬಾಣಂತಿಯರಿಗೆ ಕಡ್ಡಾಯವಾಗಿ ವೀಳ್ಯದೆಲೆಯನ್ನು ಜಗಿಯಲು ಕೊಡುತ್ತಾರೆ. ಇದರಲ್ಲಿರುವ ಒಗರಿನ ಅಂಶ ದೇಹಕ್ಕೆ ಮತ್ತೆ ಚೈತನ್ಯ ತಂದುಕೊಡುತ್ತದೆ. ಬಾಣಂತಿಗೆ ಅತ್ಯಗತ್ಯವಾದ ಕ್ಯಾಲ್ಸಿಯಂ ಅನ್ನೂ ಒದಗಿಸುತ್ತದೆ.

ಇದರಲ್ಲಿ ಮಧುಮೇಹಿ ವಿರೋಧಿಯಾದ ಟ್ಯಾನಿನ್ ಎಂಬ ಅಂಶವಿದೆ. ಇದು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಸಹಕಾರಿ.
ವೀಳ್ಯದೆಲೆಯನ್ನು ಸಾಸಿವೆ ಎಣ್ಣೆಯಲ್ಲಿ ನೆನೆಸಿಟ್ಟು, ಕಾವಲಿಯಲ್ಲಿಟ್ಟು ಬಿಸಿ ಮಾಡಿ ಎದೆ ಮೇಲೆ ಇಡುವುದರಿಂದ ಕಫದ ಬಾಧೆ ಕಡಿಮೆಯಾಗುತ್ತದೆ. ದೇಹ ತೂಕ ಇಳಿಸಲು ಬಯಸುವವರಿಗೂ ಇದು ರಾಮಬಾಣ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read