HomeKarnatakaವಿಶ್ವಪರಂಪರೆಯ ಪ್ರವಾಸಿ ತಾಣ, ಶಿಲ್ಪಕಲೆಯ ತವರು 'ಪಟ್ಟದಕಲ್ಲು'

ವಿಶ್ವಪರಂಪರೆಯ ಪ್ರವಾಸಿ ತಾಣ, ಶಿಲ್ಪಕಲೆಯ ತವರು ‘ಪಟ್ಟದಕಲ್ಲು’

ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಹೆಸರು ಹೇಳುತ್ತಲೇ ನೆನಪಾಗುವುದು ಬೃಹತ್ ದೇವಾಲಯಗಳ ಶಿಲ್ಪಕಲೆಯ ಸೌಂದರ್ಯ. ವಿಶ್ವಪರಂಪರೆಯ ತಾಣವಾದ ಪಟ್ಟದಕಲ್ಲು ಚಾಲುಕ್ಯರ ಶಿಲ್ಪಕಲೆಯನ್ನು ಬಿಂಬಿಸುತ್ತದೆ.

ಕಲ್ಲಿನಲ್ಲಿ ಅರಳಿದ ಕಲೆಯ ಸೊಬಗನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಮಲಪ್ರಭಾ ನದಿಯ ದಂಡೆಯ ಮೇಲಿರುವ ಪಟ್ಟದಕಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಬಾದಾಮಿ ತಾಲ್ಲೂಕಿನಲ್ಲಿರುವ ಪಟ್ಟದಕಲ್ಲಿನಲ್ಲಿ ಕ್ರಿ.ಶ.740 ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರುಪಾಕ್ಷ ದೇವಾಲಯ ಗಮನ ಸೆಳೆಯುತ್ತದೆ. 2ನೇ ವಿಕ್ರಮಾದಿತ್ಯ ಕಂಚಿಯ ಪಲ್ಲವರ ಮೇಲೆ ವಿಜಯ ಸಾಧಿಸಿದ ನೆನಪಿಗಾಗಿ ಇದನ್ನು ಕಟ್ಟಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಾಲುಕ್ಯರ ಕಾಲದಲ್ಲಿ ಕೆಲಕಾಲ ಇದು ರಾಜಧಾನಿಯಾಗಿತ್ತು. ಚಾಲುಕ್ಯ ಅರಸರು ಇಲ್ಲಿ ದೇವಾಲಯಗಳನ್ನು ನಿರ್ಮಿಸಿದ್ದು, ಶಿಲ್ಪಕಲೆಯ ಸೊಬಗಿಗೆ ಹೆಸರುವಾಸಿಯಾಗಿವೆ. ಮಲ್ಲಿಕಾರ್ಜುನ ದೇವಾಲಯ, ಪಾಪನಾಥ ದೇವಾಲಯ ಪ್ರಮುಖವಾದವು.

ಇಲ್ಲಿನ ಶಿಲ್ಪಕಲೆಯಲ್ಲಿ ದಕ್ಷಿಣ ಭಾರತದ ದ್ರಾವಿಡ ಶೈಲಿ, ಉತ್ತರ ಭಾರತದ ಶೈಲಿಯನ್ನೂ ಕಾಣಬಹುದು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕು ಕೇಂದ್ರದಿಂದ ಸುಮಾರು 22 ಕಿಲೋ ಮೀಟರ್ ದೂರದಲ್ಲಿ ಪಟ್ಟದಕಲ್ಲು ಇದೆ. ಪ್ರವಾಸಕ್ಕೆ ಅತ್ಯುತ್ತಮ ಸ್ಥಳವಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular