HomeIndiaವಾರ್ಡ್‌ ರೋಬ್ ತುಂಬಾ ನೀಲಿ ಬಣ್ಣದ ಉಡುಪುಗಳನ್ನೇ ಹೊಂದಿದ್ದ ಪತಿ; ಶಾಪಿಂಗ್ ನಿಂದ ಹಿಂದಿರುಗಿದ ಬಳಿಕ...

ವಾರ್ಡ್‌ ರೋಬ್ ತುಂಬಾ ನೀಲಿ ಬಣ್ಣದ ಉಡುಪುಗಳನ್ನೇ ಹೊಂದಿದ್ದ ಪತಿ; ಶಾಪಿಂಗ್ ನಿಂದ ಹಿಂದಿರುಗಿದ ಬಳಿಕ ಪತ್ನಿಗೆ ಕಾದಿತ್ತು ಶಾಕ್…!

ಶಾಪಿಂಗ್ ಮಾಡುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಕೆಲವರಂತೂ ತಮ್ಮ ನೆಚ್ಚಿನ ಬಣ್ಣದ ಉಡುಪನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ. ಅನೇಕರ ವಾರ್ಡ್ರೋಬ್ ತಮ್ಮ ನೆಚ್ಚಿನ ವರ್ಣದ ಉಡುಪುಗಳಿಂದಲೇ ತುಂಬಿರುತ್ತದೆ. ಇದೀಗ ಮಹಿಳೆಯೊಬ್ಬಳು ತನ್ನ ಪತಿಯ ವಾರ್ಡ್ರೋಬ್ ನವೀಕರಿಸಲು ಮುಂದಾಗಿದ್ದಾಳೆ. ಸದ್ಯ, ಈ ಉಡುಪಿನ ಬಗ್ಗೆ ಆನ್ಲೈನ್ ನಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ.

ಹೌದು, ಮಹಿಳೆಯೊಬ್ಬಳು ತನ್ನ ಗಂಡನನ್ನು ಶಾಪಿಂಗ್ ಮಾಡಿಕೊಂಡು ಬರುವಂತೆ ಕಳುಹಿಸಿದ್ದಾಳೆ. ಪತಿ ಮನೆಗೆ ಹಿಂದಿರುಗಿದ ಬಳಿಕ ಆತ ತೆಗೆದುಕೊಂಡಿರುವ ಉಡುಪು ನೋಡಿ ಪತ್ನಿ ಶಾಕ್ ಆಗಿದ್ದಾಳೆ. ಯಾಕೆಂದರೆ, ಪತಿ ತೆಗೆದುಕೊಂಡಿರುವ ನಾಲ್ಕೂ ಉಡುಪುಗಳು ನೀಲಿ ಬಣ್ಣದ್ದಾಗಿತ್ತು. ಇದು ಆಕೆಯನ್ನು ದಿಗ್ಭ್ರಮೆಗೊಳಿಸಿತು.

ದಿವ್ಯಾ ಶರ್ಮಾ ಎಂಬ ಟ್ವಿಟರ್ ಬಳಕೆದಾರರು ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ವಿವಿಧ ಛಾಯೆಗಳ ನಾಲ್ಕು ಶರ್ಟ್‌ಗಳ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ದಿವ್ಯಾ ಅವರ ಪತಿ ಖರೀದಿಸಿರುವ ಎಲ್ಲ ಉಡುಪಗಳು ಒಂದೇ ಬಣ್ಣದಲ್ಲಿದೆ. ನೀಲಿ ಬಣ್ಣದ ಉಡುಪುಗಳನ್ನೇ ಅವರು ಖರೀದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಡನ ವಾರ್ಡ್ರೋಬ್ ನಲ್ಲಿ ಈಗಾಗಲೇ ಹಲವಾರು ನೀಲಿ ಬಣ್ಣದ ಉಡುಪುಗಳೇ ತುಂಬಿವೆ. ಅದರ ನಡುವೆ ಇದೀಗ ಖರೀದಿಸಿದ ಉಡುಪುಗಳು ಸಹ ನೀಲಿ ಬಣ್ಣದ್ದೇ ಆಗಿದೆ. ತನಗೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ ಎಂದು ದಿವ್ಯಾ ಹೇಳಿಕೊಂಡಿದ್ದಾರೆ.

ಅನೇಕ ಬಳಕೆದಾರರು ದಿವ್ಯಾ ಅವರ ಪತಿ ಏಕೆ ನೀಲಿ ಬಣ್ಣವನ್ನೇ ಆರಿಸಿಕೊಂಡರು ಎಂಬುದಕ್ಕೆ ಕಾರಣಗಳನ್ನು ನೀಡಿದ್ದಾರೆ. ಬುದ್ಧಿವಂತಿಕೆ, ಅನಂತತೆ, ಪ್ರಶಾಂತತೆ, ಸೃಜನಶೀಲತೆ, ಸ್ಥಿರತೆ, ಕಾಲ್ಪನಿಕ, ನಂಬಿಕೆ, ನಿಷ್ಠೆ, ಆಧ್ಯಾತ್ಮಿಕತೆಯ ಕಡೆಗೆ ಆಕರ್ಷಿತರಾಗಿರುವವರು ನೀಲಿ ಬಣ್ಣದ ಉಡುಪನ್ನೇ ಧರಿಸುತ್ತಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಂದೇ ಬಣ್ಣದ ಉಡುಪನ್ನು ತೊಡುವುದರಿಂದ ಪ್ರತಿದಿನ ಯಾವ ಉಡುಪು ಧರಿಸುವುದು ಅಂತಾ ಟೆನ್ಷನ್ ತೆಗೆದುಕೊಳ್ಳುವ ರೋದನೆ ಇರೋದಿಲ್ಲ ಅಂತಾ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular