HomeKarnatakaವಲಸಿಗರು ಹೇಗೆ ಮಂತ್ರಿಯಾಗಿದ್ದಾರೆ ಎಂಬುದು ನನಗೆ ಗೊತ್ತಿದೆ; ಮುನಿರತ್ನ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ತಿರುಗೇಟು

ವಲಸಿಗರು ಹೇಗೆ ಮಂತ್ರಿಯಾಗಿದ್ದಾರೆ ಎಂಬುದು ನನಗೆ ಗೊತ್ತಿದೆ; ಮುನಿರತ್ನ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ತಿರುಗೇಟು

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಾಯಕರ ನಡುವೆ ವಾಕ್ಸಮರ ಮುಂದುವರೆದಿದ್ದು, ಸ್ಯಾಂಟ್ರೋ ರವಿಗೂ ಹಾಗೂ ಕಾಂಗ್ರೆಸ್ ನವರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದ ಸಚಿವ ಮುನಿರತ್ನ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಸಪ್ಲೈ ಮಾಡಿ ಕೆಲವರು ಮಂತ್ರಿಯಾಗಿದ್ದಾರೆ ಎಂದು ಹೇಳಿದ್ದರು. ಮತ್ತೊಬ್ಬ ಶಾಸಕ ಪಿಂಪ್ ಕೆಲಸ ಮಾಡಿ ಸಚಿವರಾಗಿದ್ದಾರೆ ಎಂದಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುನಿರತ್ನ ನನ್ನ ಗರಡಿಯಲ್ಲಿ ಪಳಗಿದವರು. ಅವರು ಹೇಗೆಂದು ನನಗೆ ಗೊತ್ತಿದೆ. ವಲಸೆ ಹೋದ ಶಾಸಕರು ಯಾವ ರೀತಿ ಮಂತ್ರಿಯಾಗಿದ್ದಾರೆ ಎಂಬ ವಿಚಾರ ನನಗೆ ತಿಳಿದಿದೆ ಎಂದು ಹೇಳಿದ ಹರಿಪ್ರಸಾದ್, ಇದನ್ನು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular