
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಡಾ. ಸುಧಾಕರ್, ಸೋಮಣ್ಣ ಮತ್ತು ಆರ್. ಅಶೋಕ್ ಮೇಲೆ ನಂಬಿಕೆಯಿಟ್ಟು 2 ಕಡೆ ಟಿಕೆಟ್ ನೀಡಲಾಗಿದೆ. ಎರಡೂ ಕಡೆ ಬಿಜೆಪಿ ಗೆಲ್ಲಲಿದೆ ಎಂದರು.
ಕೆಲವು ಸರ್ವೆಗಳ ಮೂಲಕ ಕಾಂಗ್ರೆಸ್ ನವರು ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ. ಕಾಂಗ್ರೆಸ್ ನಾಯಕರ ಕುತಂತ್ರ ಚುನಾವಣೆಯಲ್ಲಿ ಸಫಲವಾಗಲ್ಲ. ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ಒಂದು ಶಾಪವಿದ್ದಂತೆ. ಜನ ಡಬಲ್ ಇಂಜಿನ್ ಸರ್ಕಾರ ಬಯಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರಲ್ಲ. ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ ಎಂದು ಸಚಿವ ಡಾ. ಸುಧಾಕರ್ ಹೇಳಿದರು.

