HomeIndiaಲೈಂಗಿಕ ದೌರ್ಜನ್ಯ ಆರೋಪ; ಕ್ರೀಡಾ ಸಚಿವ ಸಂದೀಪ್‌ ಸಿಂಗ್‌ ವಿರುದ್ಧ FIR

ಲೈಂಗಿಕ ದೌರ್ಜನ್ಯ ಆರೋಪ; ಕ್ರೀಡಾ ಸಚಿವ ಸಂದೀಪ್‌ ಸಿಂಗ್‌ ವಿರುದ್ಧ FIR

ಚಂಡೀಗಢ- ಅಥ್ಲೆಟ್ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಹರಿಯಾಣದ ಕ್ರೀಡಾ ಸಚಿವರ ಮೇಲೆ ಇದೀಗ ಆರೋಪ ಕೇಳಿ ಬಂದಿದೆ. ಜೊತೆಗೆ ಈ ಅಥ್ಲೇಟ್ ಪೊಲೀಸರಿಗೂ ದೂರು ನೀಡಿದ್ದು, ಕ್ರೀಡಾ ಸಚಿವರ ಮೇಲೆ ಎಫ್ ಐ ಆರ್ ಕೂಡ ದಾಖಲಾಗಿದೆ.

ಹೌದು, ಮಹಿಳಾ ತರಬೇತುದಾರೆ ಹಾಗೂ ಅಥ್ಲೀಟ್ ಆಗಿರುವ ಈ ಮಹಿಳೆ, ಸಚಿವ ಸಂದೀಪ್ ಸಿಂಗ್ ತನ್ನ ಮನೆಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆಂದು ಚಂಡೀಗಢ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕ್ರೀಡಾ ಸಚುವರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅಕ್ರಮ ಬಂಧನದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಐಪಿಸಿ ಸೆಕ್ಷನ್ 354, 354A, 354B, 342, 506 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಹಿಳೆಯೊಬ್ಬರು ಕೆಲವು ಅಧಿಕೃತ ಕೆಲಸದ ಹಿನ್ನೆಲೆಯಲ್ಲಿ ಸಂದೀಪ್ ಸಿಂಗ್ ಅವರನ್ನು ಭೇಟಿಮಾಡಬೇಕಿತ್ತು. ಹೀಗಾಗಿ ಚಂಡೀಗಢದಲ್ಲಿರುವ ಅವರ ನಿವಾಸ ಹಾಗೂ ಕ್ಯಾಂಕ್ ಆಫೀಸ್‌ಗೆ ಹೋಗಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರುನಲ್ಲಿ ತಿಳಿಸಿದ್ದಾರೆ. ಇನ್ನು ಮಹಿಳೆಯ ಈ ಆರೋಪಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದ್ದು, ಇದೊಂದು ನಿರಾಧಾರ ಆರೋಪ. ಇದನ್ನು ನಾನು ಒಪ್ಪೋದಿಲ್ಲ ಎಂದು ತಳ್ಳಿಹಾಕಿದ್ದಾರೆ ಮತ್ತು ಸ್ವತಂತ್ರ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular