HomeLifestyleರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡಿ ಸವಿಯಿರಿ

ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡಿ ಸವಿಯಿರಿ

ತೆಂಗಿನ ಕಾಯಿ ದಿನನಿತ್ಯದ ಅಡುಗೆಯಲ್ಲಿ ಅಗತ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದು. ತೆಂಗಿನ ಕಾಯಿ ತುರಿಯಿಂದ ರುಚಿ ರುಚಿಯಾದ ಹಲವು ಪದಾರ್ಥಗಳನ್ನು ತಯಾರಿಸಬಹುದಾಗಿದ್ದು, ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು: 

ಅಕ್ಕಿ ಹಿಟ್ಟು 3 ಕಪ್, ತೆಂಗಿನಕಾಯಿ ತುರಿ ಅರ್ಧ ಕಪ್, ಎಳ್ಳು ಅರ್ಧ ಸ್ಪೂನ್, ಜೀರಿಗೆ ಅರ್ಧ ಸ್ಪೂನ್, ಬೆಣ್ಣೆ ಅರ್ಧ ಸ್ಪೂನ್, ಚಿಟಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಅಕ್ಕಿ ಹಿಟ್ಟನ್ನು ನೀರು ಹಾಕಿ ಹದಕ್ಕೆ ಕಲೆಸಿಕೊಳ್ಳಬೇಕು, ನಂತರ ತೆಂಗಿನ ತುರಿ, ಎಳ್ಳು, ಜೀರಿಗೆ, ಉಪ್ಪು, ಅರಿಶಿನ ಹಾಕಿ ನಾದಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ನಾದಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ತೆಳ್ಳಗೆ ತಟ್ಟಿ ಎಣ್ಣೆಯಲ್ಲಿ ಕರಿದರೆ ರುಚಿಯಾದ ತೆಂಗಿನಕಾಯಿ ವಡೆ ಸವಿಯಲು ಸಿದ್ದ.

For Latest News Updates, Join Our Whatsapp Community🚩
RELATED ARTICLES

Most Popular