HomeFeatured Newsರಾಮನವಮಿಯಂದು ಮಾಡಿ ಸ್ಪೆಷಲ್ ಹೆಸರುಬೇಳೆ ಪಾನಕ

ರಾಮನವಮಿಯಂದು ಮಾಡಿ ಸ್ಪೆಷಲ್ ಹೆಸರುಬೇಳೆ ಪಾನಕ

ನಾಳೆ ರಾಮನವಮಿ. ರಾಮ ದೇವರಿಗೆ ನೈವೇದ್ಯ ಮಾಡುವ ರುಚಿ ರುಚಿಯಾದ ಪಾನಕಗಳು ದೇಹಕ್ಕೂ ತಂಪು. ಬಿಸಿಲಿನ ತಾಪ ಕಡಿಮೆ ಮಾಡುವ ಹೆಸರು ಬೇಳೆ ಪಾನಕ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

ಹೆಸರುಬೇಳೆ 1/4 ಕಪ್
ಬೆಲ್ಲ 1/2 ಕಪ್
ತೆಂಗಿನ ತುರಿ ಸ್ವಲ್ಪ
ನಿಂಬೆ ರಸ 1 ಚಮಚ
ಏಲಕ್ಕಿ ಪುಡಿ 1 ಚಿಟಿಕೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ

ಹೆಸರು ಬೇಳೆಯನ್ನು ತೊಳೆದು ನೀರಿನಲ್ಲಿ ಒಂದು ಗಂಟೆಗಳ ಕಾಲ ನೆನೆಸಿಡಬೇಕು. ನೆನೆಸಿದ ಹೆಸರು ಬೇಳೆಗೆ, ಬೆಲ್ಲ, ಕಾಯಿ ತುರಿ, ಏಲಕ್ಕಿ ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸಿ ಜಾರಿನಲ್ಲಿ ಅರೆದು ಸೋಸ ಬೇಕು.

ಮತ್ತೆ ನೀರು ಹಾಕಿ ಸೋಸಿಕೊಳ್ಳಬೇಕು. ಹೀಗೆ ಮೂರ್ನಾಲ್ಕು ಬಾರಿ ಮಾಡಿದ ನಂತರ ನಿಂಬೆರಸ ಸೇರಿಸಿ ಪಾನಕ ಟೇಸ್ಟ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular