HomeKarnatakaರಾಜ್ಯಕ್ಕಿಂದು 'ಆಮ್ ಆದ್ಮಿ ಪಾರ್ಟಿ' ಯ ಇಬ್ಬರು ಸಿಎಂ ಗಳ ಭೇಟಿ

ರಾಜ್ಯಕ್ಕಿಂದು ‘ಆಮ್ ಆದ್ಮಿ ಪಾರ್ಟಿ’ ಯ ಇಬ್ಬರು ಸಿಎಂ ಗಳ ಭೇಟಿ

ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿರುವ ಮಧ್ಯೆ ಈಗ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯೂ ಅಖಾಡಕ್ಕಿಳಿದಿದೆ.

ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಇಂದು ಆಮ್ ಆದ್ಮಿ ಪಕ್ಷದ ರಾಜ್ಯಮಟ್ಟದ ಸಮಾವೇಶ ನಡೆಯುತ್ತಿದ್ದು, ಇದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಭಾಗವಹಿಸುತ್ತಿದ್ದಾರೆ.

12 ಗಂಟೆಗೆ ಸಮಾವೇಶ ಆರಂಭವಾಗಲಿದ್ದು, ಯಾವುದೇ ಮೆರವಣಿಗೆ ಅಥವಾ ರೋಡ್ ಶೋ ಇಲ್ಲದೆ ಇಬ್ಬರೂ ಮುಖ್ಯಮಂತ್ರಿಗಳು ನೇರವಾಗಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular