HomeIndiaರಜೆಗಾಗಿ ಇಲಾಖೆ ಎದುರು ಮನವಿ ಮಾಡಿದ ಪೊಲೀಸ್ ಪೇದೆ ಪತ್ರ ವೈರಲ್...!

ರಜೆಗಾಗಿ ಇಲಾಖೆ ಎದುರು ಮನವಿ ಮಾಡಿದ ಪೊಲೀಸ್ ಪೇದೆ ಪತ್ರ ವೈರಲ್…!

ಲಕ್ನೋ:‌ ಸಾಮಾನ್ಯವಾಗಿ ನೌಕರನೊಬ್ಬ ರಜೆ ಬೇಕು ಅಂದರೆ ಆರೋಗ್ಯ, ಕಾರ್ಯಕ್ರಮ ಹೀಗೆ ಅನೇಕ ಕಾರಣ ಕೇಳಿ ರಜೆ ಕೇಳೋದನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೇದೆ ರಜೆ ಬೇಕು ಅಂತ ವಿಚಿತ್ರವಾದಂತಹ ಕಾರಣ ಕೊಟ್ಟು ರಜೆಗೆ ಅರ್ಜಿ ಹಾಕಿದ್ದಾರೆ. ಏನದು ಆತ ಕೊಟ್ಟ ವಿಚಿತ್ರ ಕಾರಣ ಏನು ಅಂತಿರಾ…..? ಮುಂದೆ ಓದಿ.

ಹೌದು, ಸರ್ಕಾರಿ ಕೆಲಸ ಅಂದರೆ ಇಂತಿಷ್ಟು ರಜೆ ಇರುತ್ತವೆ. ಅನಿವಾರ್ಯ ಆದಾಗ ಹೆಚ್ಚು ರಜೆಗಳನ್ನು ಹಾಕೋದನ್ನ ನೋಡಿದ್ದೇವೆ. ಇಲ್ಲೊಬ್ಬ ಪೇದೆಗೆ ರಜೆ ಬೇಕಾದ ಹಿನ್ನೆಲೆ ಇಲಾಖೆಗೊಂದು ಅರ್ಜಿ ಕೊಟ್ಟಿದ್ದಾರೆ. ನನ್ನ ಹೆಂಡತಿ ನನಗೆ ರಜೆ ಇಲ್ಲ ಅಂತ ಕೋಪಗೊಂಡಿದ್ದಾಳೆ. ಕೂಡಲೆ ರಜೆ ನೀಡಿ ಎಂದು ಪತ್ರ ಬರೆದಿದ್ದಾರೆ. ಯುಪಿಯ ಮಹಾರಾಜ್‌ಗಂಜ್ ಜಿಲ್ಲೆಯ ನೌತನ್ವಾ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಪೇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನಗೆ ರಜೆ ಇಲ್ಲ ಅಂತ ಹೆಂಡತಿ ಸಿಟ್ಟಾಗಿದ್ದಾಳೆ. ನನ್ನ ಜೊತೆ ಸರಿಯಾಗಿ ಮಾತಾಡುತ್ತಿಲ್ಲ. ಫೋನ್ ಕರೆ ಕೂಡ ರಿಸೀವ್ ಮಾಡ್ತಾ ಇಲ್ಲ. ಹಾಗಾಗಿ ನನಗೆ ರಜೆ ಬೇಕು ಎಂದು ಪತ್ರ ಬರೆದಿದ್ದಾರೆ. ಕೂಡಲೇ ಮೇಲಾಧಿಕಾರಿ 5 ದಿನ ರಜೆ ನೀಡಿದ್ದಾರೆ. ಇನ್ನು ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular