
ಇದರ ಮಧ್ಯೆ ಮೀಸಲಾತಿ ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಲಿ ಇರುವ ಒಟ್ಟು ಮೀಸಲು ಮಿತಿಯನ್ನು ಶೇಕಡ 50 ರಿಂದ ಶೇಕಡ 75ಕ್ಕೆ ಹೆಚ್ಚಿಸಲು ನಮ್ಮ ಪಕ್ಷ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಶೇಕಡ 50 ಮೀಸಲು ಮಿತಿಯನ್ನು ರದ್ದುಪಡಿಸಿದರೆ ಎಲ್ಲ ವರ್ಗಗಳಿಗೂ ಮೀಸಲು ಪಡೆಯಲು ಅನುಕೂಲವಾಗುತ್ತದೆ ಎಂದು ಪ್ರತಿಪಾದಿಸಿರುವ ಅವರು, ಹೀಗಾಗಿ ಜನಸಂಖ್ಯೆ ಆಧಾರದಲ್ಲಿ ಎಲ್ಲ ಜಾತಿಗಳಿಗೆ ಒಟ್ಟು ಮೀಸಲನ್ನು ಶೇಕಡ 75 ಕ್ಕೆ ಹೆಚ್ಚಿಸಬೇಕು ಎಂದು ಹೇಳಿದ್ದಾರೆ.

