HomeKarnataka'ಮಸಾಜ್ ಪಾರ್ಲರ್' ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ರೇಪ್

‘ಮಸಾಜ್ ಪಾರ್ಲರ್’ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ರೇಪ್

ಮಸಾಜ್ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಪಾರ್ಲರ್ ಮಾಲೀಕರಿಗೆ ಪರಿಚಯವಿದ್ದ ವ್ಯಕ್ತಿಯೇ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಈಗ ರವೀಂದ್ರ ಶೆಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ: ಬೆಂಗಳೂರು ನಿವಾಸಿಯಾಗಿದ್ದ 21 ವರ್ಷದ ಈ ಯುವತಿ, ಮಸಾಜ್ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದು, ಪಾರ್ಲರ್ ಮಾಲೀಕರಿಗೆ ಪರಿಚಿತನಾಗಿದ್ದ ಆರೋಪಿ ಆಗಾಗ ಬಂದು ಹೋಗುತ್ತಿದ್ದ.

ಹೀಗಾಗಿ ಯುವತಿಗೂ ಆತ ಪರಿಚಯವಾಗಿದ್ದು, ಫೆಬ್ರವರಿ 14ರಂದು ಪಾರ್ಲರ್ ನಲ್ಲಿಯೇ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಯುವತಿ ನೀಡಿದ ದೂರಿನ ಮೇರೆಗೆ 42 ವರ್ಷದ ಆರೋಪಿಯನ್ನು ಬಂಧಿಸಿರುವ ಜಯನಗರ ಠಾಣೆ ಪೊಲೀಸರು, ಪಾರ್ಲರ್ ಮಾಲೀಕರಾದ ಮಹಿಳೆಯನ್ನೂ ಆರೋಪಿಯನ್ನಾಗಿ ಹೆಸರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular