HomeLifestyleಮಳೆಗಾಲಕ್ಕೆ ಮಾಡಿ ಆರೋಗ್ಯಕ್ಕೆ ಹಿತಕರ ಬಿಸಿ ಬಿಸಿ ಪುದೀನಾ 'ಸೂಪ್'

ಮಳೆಗಾಲಕ್ಕೆ ಮಾಡಿ ಆರೋಗ್ಯಕ್ಕೆ ಹಿತಕರ ಬಿಸಿ ಬಿಸಿ ಪುದೀನಾ ‘ಸೂಪ್’

ಪುದೀನಾ ಸೊಪ್ಪು ಆರೋಗ್ಯಕ್ಕೆ ಹಿತ. ಇದರಿಂದ ಅಡುಗೆ ರುಚಿ ಸಹ ಇನ್ನಷ್ಟು ಹೆಚ್ಚುತ್ತದೆ. ದೇಹವನ್ನು ತಂಪು ಮಾಡುವ ಗುಣ ಹೊಂದಿರುವ ಪುದೀನಾವನ್ನು ಆಗಾಗ ಬಳಸುತ್ತಿದ್ದರೆ ಉತ್ತಮ.

ಮಳೆ ಬೀಳುತ್ತಿರುವುದರಿಂದ ಬಿಸಿ ಬಿಸಿಯಾಗಿ ಇದರ ಸೂಪ್ ಸವಿದರೆ ಹಿತವಾಗಿರುತ್ತದೆ. ಇದನ್ನು ಸಿಂಪಲ್ ಆಗಿ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪುದೀನಾ 1/2 ಕಟ್ಟು
ಕೊತ್ತಂಬರಿ ಸೊಪ್ಪು 1/4 ಕಟ್ಟು
ಕರಿಮೆಣಸಿನ ಪುಡಿ 1/4 ಚಮಚ
ಬೆಣ್ಣೆ 1 ಚಮಚ
ಫ್ರೆಶ್ ಕ್ರೀಂ 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಪುದೀನಾ ಮತ್ತು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ.

ಇದಕ್ಕೆ ರುಬ್ಬಿದ ಪುದೀನಾ ಮಿಶ್ರಣ ಹಾಗೂ ಬೇಕಾಗುವಷ್ಟು ನೀರು ಉಪ್ಪು, ಕರಿಮೆಣಸಿನ ಪುಡಿ ಹಾಕಿ ಸ್ವಲ್ಪ ಕುದಿಸಿ ಇಳಿಸಿ. ಮೇಲೆ ಫ್ರೆಶ್ ಕ್ರೀಮ್ ನಿಂದ ಅಲಂಕರಿಸಿದರೆ ರುಚಿಯಾದ ಪುದೀನಾ ಸೂಪ್ ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular