HomeKarnatakaಮಲೆನಾಡಿನಲ್ಲಿ ವರ್ಷದ ಮೊದಲ ಮಳೆಯ ಸಿಂಚನ...!

ಮಲೆನಾಡಿನಲ್ಲಿ ವರ್ಷದ ಮೊದಲ ಮಳೆಯ ಸಿಂಚನ…!

ಪ್ರಸ್ತುತ ಬೆಳಗಿನ ಜಾವ ಮೈ ಕೊರೆಯುವಂತೆ ಚಳಿ ಕಾಡುತ್ತಿದ್ದು, ಮಧ್ಯಾಹ್ನದ ವೇಳೆಗೆ ಬಿರು ಬಿಸಿಲು ಬರುತ್ತದೆ. ಇದರ ಮಧ್ಯೆ ಮಂಗಳವಾರದಂದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ತುಂತುರು ಮಳೆ ಸುರಿದು ಅಚ್ಚರಿ ಮೂಡಿಸಿದೆ.

ಸಂಜೆ 4 ಗಂಟೆ ಸುಮಾರಿಗೆ ಭದ್ರಾವತಿ ತಾಲೂಕಿನ ಹಲವೆಡೆ ಆರಂಭವಾದ ತುಂತುರು ಮಳೆ ರಾತ್ರಿಯವರೆಗೂ ಸಣ್ಣ ಸಣ್ಣ ಹನಿಗಳಾಗಿ ಬಿದ್ದಿದೆ. ಅಲ್ಲದೆ ಜಿಲ್ಲೆಯ ಶಿಕಾರಿಪುರ, ಆನಂದಪುರ, ರಿಪ್ಪನ್ ಪೇಟೆ ಭಾಗದಲ್ಲಿ ಗುಡುಗು ಸಹಿತ ತುಂತುರು ಮಳೆ ಸುರಿದಿದೆ.

ಮಲೆನಾಡಿನ ಹಲವು ಭಾಗಗಳಲ್ಲಿ ಈಗ ಮಾರಿಕಾಂಬ ಜಾತ್ರೆ ನಡೆಯುತ್ತಿದ್ದು, ಈ ರೀತಿ ಸುರಿದ ತುಂತುರು ಮಳೆಯಿಂದ ಜಾತ್ರೆಗೆ ಬಂದವರು ಪರದಾಡಿದ್ದಾರೆ. ಜಾತ್ರೆಗಾಗಿ ಹಾಕಿದ್ದ ಅಂಗಡಿ ಮುಂಗಟ್ಟುಗಳು ಮಳೆಯಿಂದ ಸಂಪೂರ್ಣವಾಗಿ ನೆಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular