HomeKarnatakaಮನೆಯಿಂದಲೇ ಮತ ಚಲಾಯಿಸಿದ ಶತಾಯುಷಿ; ಕರೆ ಮಾಡಿ ಅಭಿನಂದಿಸಿದ ಮುಖ್ಯ ಚುನಾವಣಾ ಆಯುಕ್ತ

ಮನೆಯಿಂದಲೇ ಮತ ಚಲಾಯಿಸಿದ ಶತಾಯುಷಿ; ಕರೆ ಮಾಡಿ ಅಭಿನಂದಿಸಿದ ಮುಖ್ಯ ಚುನಾವಣಾ ಆಯುಕ್ತ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಿರಿಯರು, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದ್ದು, ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ವೃದ್ಧೆಯೊಬ್ಬರು ತಮ್ಮ ಪತಿಯ ಸಾವಿನ ನೋವಿನಲ್ಲೂ ಅವರ ಪಾರ್ಥಿವ ಶರೀರದ ಮುಂದೆಯೇ ಮತ ಚಲಾಯಿಸಿ ತಮ್ಮ ಕರ್ತವ್ಯ ಮೆರೆದ ಘಟನೆ ನಡೆದಿದ್ದರ ಮಧ್ಯೆ ಬೆಳಗಾವಿಯಲ್ಲಿ ಶತಾಯುಷಿಯೊಬ್ಬರು ಮತದಾನದ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ 103 ವರ್ಷದ ಮಹಾದೇವ ಮಹಾಲಿಂಗ ಮಾಳಿ ಸೋಮವಾರದಂದು ತಮ್ಮ ಮನೆಯಿಂದಲೇ ಮತ ಚಲಾಯಿಸಿದ್ದು, ಮಂಗಳವಾರದಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, ಮಹಾದೇವ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular