HomeIndiaಮನೆಯಲ್ಲಿ ಭೀಕರ ಸ್ಫೋಟ; ಓರ್ವ ಬಾಲಕ ಸಾವು - ಮೂವರ ಸ್ಥಿತಿ ಗಂಭೀರ

ಮನೆಯಲ್ಲಿ ಭೀಕರ ಸ್ಫೋಟ; ಓರ್ವ ಬಾಲಕ ಸಾವು – ಮೂವರ ಸ್ಥಿತಿ ಗಂಭೀರ

ಪಾಟ್ನಾ: ಮನೆಯೊಂದರಲ್ಲಿ ಸಂಭವಿಸಿದ ಬೀಕರ ಸ್ಫೋಟದಲ್ಲಿ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದ ಭಾಗಲ್ ಪುರ ಜಿಲ್ಲೆಯ ಬಾಬರ್ ಗಂಜ್ ಪ್ರದೇಶದಲ್ಲಿ ನಡೆದಿದೆ.

ಹುಸಾನಾಬಾದ್ ಖುರೇಷಿಯಲ್ಲಿನ ಎರಡು ಅಂತಸ್ಥಿನ ಕಟ್ಟಡದ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, 17 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಮನೆಯ ಒಂದು ಭಾಗ ಸಂಪೂರ್ಣ ಕುಸಿದಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular